ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನೀರು ಶೇಖರಣಾ ಘಟಕ ಉದ್ಘಾಟನೆ

JANANUDI.COM NETWORK


ಕುಂದಾಪುರ. ಮಾ.11:ದಾನಿಗಳ ಸಹಕಾರದಿಂದ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನಿರ್ಮಿಸಿದ ನೀರಿನ ಘಟಕದಿಂದ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.ಇದಕ್ಕೆ ಸಹಕಾರಿಯಾದ ದಾನಿ ಸಮೀರ್ ಪಿಂಟೋ ಹಾಗೂ ಕುಂದಾಪುರ ಪುರಸಭೆಗೆ ನಾವು ಅಭಾರಿಯಾಗಿದ್ದೇವೆ ಎಂದು ಕುಂದಾಪುರ ಸೈಂಟ್ ಮೇರಿಸ್ ಸಮೂಹ ವಿದ್ಯಾಸಂಸ್ಥೆಯ ಸಂಚಾಲಕರು,ಕುಂದಾಪುರ ವಲಯ ಧರ್ಮಗುರುಗಳು ಆದ ಅತೀ ವಂ.ಫಾ.ಸ್ಟ್ಯಾನಿ ತಾವೋ ಹೇಳಿದರು.
ಅವರು ಶುಕ್ರವಾರ ಕುಂದಾಪುರದ ಪ್ರತಿಷ್ಠಿತ ಸೈಂಟ್ ಮೇರಿಸ್ ಸಮೂಹ ವಿದ್ಯಾಸಂಸ್ಥೆಯಲ್ಲಿ ದಾನಿ ಸಮೀರ್ ಪಿಂಟೊ ಅವರು ತನ್ನ ತಾಯಿ ದಿ.ಫೆಲ್ಸಿ ಪಿಂಟೊ ಸವಿನೆನಪಿಗಾಗಿ ಕುಂದಾಪುರ ಪುರಸಭೆಯ ಸಹಕಾರದಲ್ಲಿ ನಿರ್ಮಿಸಲಾದ ನೀರಿನ ಶೇಖರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಪುರಸಭೆಯ ಸದಸ್ಯ ಪ್ರಭಾಕರ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಹೋಲಿ ರೋಜರಿ ಚರ್ಚ್‍ನ ಉಪಾಧ್ಯಕ್ಷ ಲೂಯಿಸ್ ಜೆ.ಫೆರ್ನಾಂಡಿಸ್ ,ಹೋಲಿ ರೋಜರಿ ಚರ್ಚ್ ಆರ್ಥಿಕ ಮಂಡಳಿ ಅಧ್ಯಕ್ಷ ಜಾನ್ಸನ್ ಡಿ.ಅಲ್ಮೇಡಾ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೈಂಟ್ ಮೇರಿಸ್ ಸಮೂಹ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಅಸುಂತಾ ಲೋಬೋ,ರೇಶ್ಮಾ ಫೆರ್ನಾೀಡಿಸ್,ಸಿಸ್ಟರ್ ತೆರೇಜಾ ಶಾಂತಿ,ವಿದ್ಯಾರ್ಥಿ ಪ್ರತಿನಿಧಿಗಳಾದ ನಂದಿತಾ ನಾಯ್ಕ್, ನಿಶಾಂತ್, ವರಲಕ್ಷ್ಮೀ,ರಿಷೀಕಾ, ಕುಂದಾಪುರ ಚರ್ಚಿನ ಆರ್ಥಿಕ ಮಂಡಳಿಯ ಸದಸ್ಯರು, ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲೋ, 20 ಆಯೋಗಗಳ ಸಂಚಾಲಕಿ ಪ್ರೇಮ ಡಿಕುನ್ಹಾ, ಸೈಂಟ್ ಮೇರಿಸ್ ಕಥೊಲಿಕ್ ಸಮೂಹ ವಿದ್ಯಾ ಸಂಸ್ಥೆಯ ಎಲ್ಲಾ ಶಾಲಾ ಮತ್ತು ಸೈಂಟ್ ಮೇರಿಸ್ ಪಿ.ಯು. ಕಾಲೇಜಿನ ಅಭಿವ್ರದ್ದಿ ಮಂಡಳಿ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು.
ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.