ದಿನಾಂಕ 19 -01- 2025 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ಕಲ್ಯಾಣಪುರ ಚರ್ಚ್ ನಾ ವಂದನೀಯ ಡಾ ಜೇನ್ಸಿಲ್ ಆಳ್ವಾ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸಬ್ಬಾಸ್ಟಿಯಾನರ ಪ್ರತಿಮೆಯಾನು ಮೆರವಣಿಗೆಯಲ್ಲಿ ತಂದು ಆಶೀರ್ವಚನವನ್ನು ನೀಡಲಾಯಿತು.
ತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಉದ್ಘಾಟಕರಾಗಿ ವಂದನೀಯ ಡಾ ಜೇನ್ಸಿಲ್ ಆಳ್ವಾ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯಾ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್, ಉಪ ಯಜಕ ವಲೇಶ್ ಆರಾನ್ಹ
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕರಾದ ಶ್ರೀಮತಿ ಬೆನ್ನಡಿಕ್ಟ ನೋರೊನ್ಹ, ಇವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ತದನಂತರ ಮಾತನಾಡಿದ ವಂದನೀಯ ಡಾ ಜೇನ್ಸಿಲ್ ಆಳ್ವಾ ಮಾತನಾಡಿದ ಸಂತ ಲಾರೆನ್ಸರ ಹಬ್ಬ ಅನೇಕ ವರ್ಷಗಳಿಂದ ಅನೇಕ ಭಕ್ತಾದಿಗಳನ್ನು ಜಾತಿ ಮತ ಧರ್ಮ ಬೇಯುತವಿಲ್ಲದೆ ಆಚರಣೆ ಮಾಡಲಾಗುತ್ತದೆ ಸಂತ ಲಾರೆನ್ಸರು ಅನೇಕ ಆಶೀರ್ವಾದಗಳು ಪವಾಡಗಳು ಈ ಪವಿತ್ರ ಜಾಗದಲ್ಲಿ ನಡೆಯುತ್ತದೆ. ಪ್ರತಿಯೊಬ್ಬರ ಸಹಕಾರವು ಅಗತ್ಯವಾಗಿದೆ ಎಂದು ಶುಭ ಹಾರೈಸಿದರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಇವರು ಕಾರ್ಯಕ್ರಮ ನೆರವೇರಸಿದುರು. ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ. ಧನ್ಯವಾದ ಸಮರ್ಪಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.