

ಮಾರ್ಚ್ 10 ಮತ್ತು 11, 2025 ; ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಸಂಸ್ಥೆ, “ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಪ್ರಗತಿ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಎರಡು ದಿನಗಳ ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಉದ್ಯಮ ವೃತ್ತಿಪರರಾದಿಯಾಗಿ 150 ಜನರು ಭಾಗವಹಿಸಿ ಹೊಸ ತಂತ್ರಜ್ಞಾನ ವಿಷಯಗಳನ್ನು ಚರ್ಚಿಸಿದರು.
ಸಮ್ಮೇಳನದ ಪ್ರಾರಂಭದಲ್ಲಿ ಪ್ರಾರ್ಥನೆ, ವಿಶ್ವವಿದ್ಯಾಲಯ ಗೀತ ಮತ್ತು ದೀಪ ಬೆಳಗಿಸಿ ಸಮಾರಂಭವನ್ನು ಆರಂಭಿಸಲಾಯಿತು. ಡಾ. ಆನಿ ಸಿರಿಯನ್ ಅವರು ಉಪನ್ಯಾಸ ನೀಡಿ ಅಕಾಡೆಮಿಕ್ ಸಹಕಾರ ಮತ್ತು ಜ್ಞಾನ ವಿನಿಮಯದ ಮಹತ್ವವನ್ನು ವಿವರಿಸಿದರು. ಹಂಗಾಮಿ ಉಪಕುಲಪತಿ ಡಾ. ರೊನಾಲ್ಡ್ ಮಸ್ಕರೇನ್ಹಸ್, ಕಂಪ್ಯೂಟರ್ ವಿಜ್ಞಾನ ಮತ್ತು ರಸಾಯನಶಾಸ್ತ್ರದ ನಡುವಿನ ಬೆಳೆಯುತ್ತಿರುವ ಸಮನ್ವಯತೆಯ ಬಗ್ಗೆ ತಿಳಿಸಿದರು. ಪ್ರೊ-ಉಪಕುಲಪತಿ ಶ್ರೀಮತಿ ರೆಜಿನಾ ಮಥಾಯಸ್, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ ಆಧಾರಿತ ಚರ್ಚೆಗಳ ಮಹತ್ವವನ್ನು ತಿಳಿಸಿದರು.ಮುಖ್ಯ ಅತಿಥಿ ಶ್ರೀ ತಾಂಡವ ಪೊಪುರಿ, ಡೆಲ್ ಟೆಕ್ನೋಲಜೀಸ್, ಅವರು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಮೆಶಿನ್ ಲರ್ನಿಂಗ್ ಕುರಿತು ಉಪನ್ಯಾಸ ನೀಡಿದರು. ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಡಾ.ಬಿ.ಜಿ. ಪ್ರಶಾಂತಿ ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
ಮೊದಲ ದಿನ “ಆರೋಗ್ಯ ಸೇವೆಯಲ್ಲಿ ಎಐ ಮತ್ತು ಇತ್ತೀಚಿನ ಪ್ರಗತಿಗಳು” ಕುರಿತು ಮುಖ್ಯ ಭಾಷಣ ಹಾಗೂ ಸೈಬರ್ ಸಿಸ್ಟಮ್ ಸಂಬಂಧಿತ ತಂತ್ರಜ್ಞಾನಗಳ ಕುರಿತು ತಾಂತ್ರಿಕ ಅಧಿವೇಶನ ನಡೆಯಿತು. ಡಾ. ಕೆ. ಗೋಪಾಲಕೃಷ್ಣನ್ ನೇತೃತ್ವದಲ್ಲಿ ಸೈಬರ್ ಭದ್ರತೆಯ ಮುಂದಿನ ಪೀಳಿಗೆಯ ಪ್ರವೃತ್ತಿಗಳ ಕುರಿತು ತಾಂತ್ರಿಕ ಅಧಿವೇಶನ, ನಂತರ ಎಐ ಅಪ್ಲಿಕೇಶನ್ಗಳು, ಸೈಬರ್ ಭದ್ರತೆ ಮತ್ತು ಡಿಜಿಟಲ್ ರೂಪಾಂತರದಲ್ಲಿನ ಪ್ರಗತಿಗಳ ಕುರಿತು ಸಂಶೋಧನಾ ಪ್ರಸ್ತುತಿಗಳು ನಡೆದವು.
ಎರಡನೇ ದಿನದಂದು, ಮಂಗಳೂರಿನ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಡಾ. ರೂಬನ್ ಅವರು “ಆರೋಗ್ಯ ರಕ್ಷಣೆ ತಂತ್ರಜ್ಞಾನದಲ್ಲಿನ ಪ್ರಗತಿಗಳು – ಎಐ ಸಂಶೋಧನೆ ಮತ್ತು ವಾಸ್ತವದ ಒಳನೋಟಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಮ್ಮೇಳನವು ಶೈಕ್ಷಣಿಕ ಮತ್ತು ಉದ್ಯಮದ ಪ್ರಮುಖ ಭಾಷಣಕಾರರನ್ನು ಒಳಗೊಂಡ ಸಮಾರೋಪ ಅಧಿವೇಶನದೊಂದಿಗೆ ಮುಕ್ತಾಯಗೊಂಡಿತು. ಮಾಹಿತಿ ತಂತ್ರಜ್ಞಾನ ಶಾಲೆಯ ಡೀನ್ ಫಾದರ್ ಡೆನ್ಜಿಲ್ ಲೋಬೊ ಅವರು ಸಮ್ಮೇಳನದ ಶೈಕ್ಷಣಿಕ ಮತ್ತು ಕೈಗಾರಿಕಾ ಮಹತ್ವದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿ ಡಾ. ಶ್ರೀನಿವಾಸ್ ಕಥಾರ್ಗುಪ್ಪೆ ಅವರು ಐಟಿ ಭವಿಷ್ಯವನ್ನು ರೂಪಿಸುವಲ್ಲಿ ಸಂಶೋಧನೆಯ ಪಾತ್ರವನ್ನು ತಿಳಿಸಿದರು. ಅಮೆರಿಕದ ಸಾಂತಾ ಕ್ಲಾರಾದ ಎಎಮ್’ಡಿ ಯಲ್ಲಿ ಹಿರಿಯ ಉತ್ಪಾದನಾ ಕಾರ್ಯಾಚರಣೆಯ ಉದ್ಯೋಗಿಯಾದ ಶ್ರೀ ಟೆರೆನ್ಸ್ ಆಂಡ್ರೇಡ್ ಅವರು ಉತ್ಪಾದನೆ ಮತ್ತು ಉತ್ಪಾದನೆಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಒಳನೋಟಗಳನ್ನು ನೀಡಿದರು.
St. Joseph’s University – International Conference on Current Trends in Information Technology

March 10th and 11th 2025; The School of Information Technology, St. Joseph’s University, successfully hosted the International Conference on Current Trends in Information Technology (ICCTIT-2025). This two-day event brought together researchers, academicians, and industry professionals to discuss the latest advancements in IT. The conference witnessed the enthusiastic participation of nearly 150 scholars, who presented research papers on emerging technological trends.
The conference began with a prayer, a university anthem, and a traditional lamp-lighting ceremony attended by dignitaries. The inaugural session featured a welcome address by Dr. Annie Syrien, Convenor of the International Conference, who emphasized the importance of academic collaboration and knowledge exchange in shaping the future of IT. Dr. Ronald Mascarenhas, Acting Vice-Chancellor, emphasized the growing synergy between computer science and chemistry, highlighting how AI-driven simulations transform fields such as drug discovery and material sciences.
Ms. Regina Mathias, Pro-Vice Chancellor, underscored the importance of research-driven discussions in academia. At the same time, Chief Guest Mr. Thandava Popuri, Senior Director at Dell Technologies, delivered a keynote on Artificial Intelligence (AI), Machine Learning (ML), and industry trends. He elaborated on the impact of AI in healthcare, cybersecurity, and automation, encouraging young researchers to explore these transformative features. The inaugural session of the international conference successfully concluded by Dr.B.G.Prasanthi .
The first day featured a keynote on “Current Trends in IT & AI in Healthcare,” setting the stage for discussions on AI-driven innovations in medicine.
A technical session on Next generation trends on Cybersecurity led by Dr. K. Gopalakrishnan, Professor at LICET followed by research presentations on advancements in AI applications, cybersecurity, and digital transformation.
On the second day, Dr. Ruban from St. Aloysius University, Mangalore, delivered a talk on “Advances in Healthcare Technology – Research and Reality Insights into AI,” while Dr. Dileep Kumar, Vice chancellor, Hansard University, Nigeria spoke on “Industrial Revolution and Technology Advancements,” focusing on AI, IoT and automation.
The conference concluded with a valedictory session featuring prominent speakers from academia and industry. Fr. Denzil Lobo, Dean ,School of Information technology emphasized the conference’s academic and industrial significance, while Dr. Srinivas Katharguppe, Chief Guest, highlighted the role of research in shaping the future of IT. Mr. Terrence Andrade, Senior Production Operations at AMD, Santa Clara, USA, provided insights into emerging technologies in production and manufacturing. The event recognized outstanding research contributions with awards and certificates, celebrating innovations in Artificial Intelligence, Cyber security, and IT advancements. ICCTIT-2025 served as a crucial platform for networking, knowledge exchange, and industry-academia collaboration, offering valuable insights into the future of technology. The university extended its gratitude to all speakers, participants, and sponsors for supporting the conference a resounding success.

