ಸಂತ ಜೋಸೆಫ್ ಪ್ರೌಢಶಾಲೆ : ಸುಧೀರ್ಘ ಸೇವೆಯ ಗುಮಾಸ್ತೆ ವಿನಯಾ ಡಿಕೋಸ್ತಾರವರಿಗೆ-ನಿವ್ರತ್ತಿಯ ಬೀಳ್ಕೊಡುಗೆ ಸಮಾರಂಭ


ಕುಂದಾಪುರ,ಅ.20: ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸತತ 39 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿ ನಿವ್ರತ್ತರಾದ ಶಿಕ್ಷಕೇತರ ಸಿಬಂದಿ ದ್ವೀತಿಯ ದರ್ಜೆ ಗುಮಾಸ್ತೆ ಶ್ರೀಮತಿ ವಿನಯಾ ಡಿಕೋಸ್ತಾರವರಿಗೆ ಶಾಲಾ ಆಡಳಿತ, ಶಾಲಾ ಶಿಕ್ಷಕ , ಶಿಕ್ಷಕೇತರ ಸಿಬಂದಿ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಅವರಿಗೆ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾಸಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ‘ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಸೇವೆ ನೀಡಿದ ಶ್ರೀಮತಿ ಜೊಸ್ಪಿನ್ ವಿನಯಾ ಡಿಕೋಸಾರವರು, ತಾವು ಸೇವೆ ನೀಡುವಾಗ, ನಿಶ್ಠೆಯಿಂದ, ಪ್ರಮಾಣಿಕತೆಯಿಂದ, ಪ್ರೀತಿ ಮಮತೆಯಿಂದ ಸೇವೆ ನೀಡಿದ್ದಾರೆ. ಅವರು ಕೇವಲ ಸ್ವಲ್ಪ ವರ್ಷಗಳ ಸೇವೆಯಲ್ಲ, ಈ ಒಂದೇ ಸಂಸ್ಥೆಯಲ್ಲಿ ಸುಧೀರ್ಘವಾಗಿ 39 ವರ್ಷ ಉತ್ತಮ ಸೇವೆ ನೀಡಿದ್ದಾರೆ, ಅವರಿಗೆ ನಾವು ಇವತ್ತು ಥೆಂಕ್ಯೂ ಅಂತಾ ಹೇಳಬೇಕು, ಯಾಕೆಂದರೆ ಅವರ ಸೇವೆ ಅಮೂಲ್ಯವಾದುದೆಂದು ನಾನು ಕೇಳಿದ್ದೆನೆ, ನಮ್ಮ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಇವತ್ತು ಈ ಕಾರ್ಯಕ್ರಮದಲ್ಲಿ ಇರಬೇಕಿತ್ತು, ಆದರೆ ಅವರು ಕಾರಣಾಂತರದಿಂದ ಊರಲ್ಲಿ ಇಲ್ಲ, ಅವರು ಹೇಳಿದ ಪ್ರಕಾರ ವಿನಯನವರು, ಚರ್ಚಿನಲ್ಲಿ ಕೂಡ ನಾನಾ ರೀತಿಯಲ್ಲಿ ತಮ್ಮನ್ನು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ, ತಮ್ಮ ಸೇವೆಗೆ ಅವರು ಸದಾ ಸಿದ್ದರಿರುವರಾಗಿದ್ದು, ಸೇವೆಗೆ ಖ್ಯಾತರಾದವರು.” ಎಂದು ಹೇಳಿ ಅವರಿಗೆ ನಿವ್ರತ್ತ ಜೀವನ ಸುಖಮಯವಾಗಲಿ ಎಂದು ಹರಸಿದರು.
ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ ‘ವಿನಯಾಳ ಸುಧೀರ್ಘ ಸೇವೆಯಲ್ಲಿ ಯಾವುದೇ ಲೋಪವಾಗದೆ ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನು ನಿರ್ವಹಿಸಿದವರು. ಶಾಲೆಯಲ್ಲಿ ಸೇವೆ ನೀಡುತ್ತಾ ಇರುವಾಗ ಬಡ ಮಕ್ಕಳಿಗೆ ಸಹಾಯಧನ ನೀಡಿ ಅವರು ವಿದ್ಯಾರ್ಥಿಗಳಿಗೆ ಕರುಣಾಮಯಿಯಾಗಿದ್ದರು. ಮಾಜಿ ಮುಖ್ಯ ಶಿಕ್ಷಕಿ ಸಿಸ್ಟರ್ ಆಶಾ ಮಾತನಾಡಿ “ವಿನಯಾ ನನ್ನ ವಿದ್ಯಾಥಿನಿ ಎಂದು ನನಗೆ ಅಭಿಮಾನ, ಅವಳು ಚಿಕ್ಕಂದಿರುವಾಗಲೇ ತುಂಬಾ ಪ್ರತಿಭಾಶಾಲಿ, ಕೆಲಸದಲ್ಲಿ ಕೂಡ ಅತ್ಯಂತ ಚುರುಕು, ನಾನೇ ಅವಳಲ್ಲಿ ಸಲಹೆ ಕೇಳುತಿದ್ದೆ, ಹಿರಿಯ ಗುಮಾಸ್ತೆಯಾಗಿ, ಅವಳಿಂದ ಸಲಹೆ ಕೇಳುವರು ತುಂಬ ಜನ ಇದ್ದಾರೆ’ ಎಂದು ಹೆಮ್ಮೆಯ ನುಡಿಗಳನ್ನಾಡಿದರು.
ಸಹ ಶಿಕ್ಷಕಿ ಶ್ರೀಮತಿ ಸ್ವಾತಿ ಸನ್ಮಾನ ಪತ್ರವನ್ನು ವಾಚಿಸಿದರು. ಇದೇ ಶಾಲೆಯ ಹಳೆ ವಿಧ್ಯಾರ್ಥಿ ವಿನಯಾಳ ಮಗಳು ಮಾತನಾಡಿ “ನನ್ನ ತಾಯಿ ಜೀವನದಲ್ಲಿ ನಮಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ, ಅದೇ ರೀತಿ ಶಿಸ್ತಿನಿಂದ ಪೆÇೀಷಿಸಿದ್ದಾರೆ, ನಮ್ಮಂತ್ತೆ ನಮ್ಮ ಶಾಲೆಯ ಮಕ್ಕಳಿಗೂ ತಮ್ಮ ಮಕ್ಕಳು ಎಂಬತ್ತೆ ಪ್ರೀತಿ ಕೊಟ್ಟಿದ್ದಾರೆ, ಕಷ್ಟದಲ್ಲಿದ್ದವರಿಗೆ ಸಹಾಯ, ಎಡವಿದಾಗ ತಿದ್ದಿ ಬುದ್ದಿ ಹೇಳಿದ್ದಾರೆ, ಅವರು ನಮಗೆ ಜೀವನದಲ್ಲಿ ಆದರ್ಶ ವ್ಯಕ್ತ್ತಿಯಾಗಿದ್ದಾರೆ” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ವಿನಯಾಳ ಪತಿ ಸಾಹಿತಿ ಪತ್ರಕರ್ತ ಸಂತ ಜೋಸೆಫ್ ಶಾಲೆಗಳು ಮತ್ತು ಕಾನ್ವೆಂಟಿಗೆ ನಮಗೆ ಆನಾನುಬಂಧ ಸಂಬಂಧ’ ಎಂದು ತಿಳಿಸಿದರು. ರಕ್ಷಕ ಸಂಘದ ಅಧ್ಯಕ್ಷ ರವಿ ಪೂಜಾರಿ ಶುಭ ಕೋರಿದರು
ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ಅವರೆ ಸಂಯೋಜಿಸಿದ ಅಭಿನಂದನ ಗೀತೆಯನ್ನು ವಿದ್ಯಾರ್ಥಿಗಳ ಜೊತೆ ಹಾಡಿದರು. ಸಂತ ಜೋಸೆಫ್ ಹಿರಿಯ ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರೇಮಿಕಾ,ಗಂಗೊಳ್ಳಿ ಸ್ಟೆಲ್ಲಾ ಮಾರೀಸ್ ಶಾಲೆಯ ಶಿಕ್ಷಕಿಯರಾದ ಧರ್ಮಭಗಿನಿಯರು, ಶಾಲೆಯ ಸಹ ಶಿಕ್ಷಕಿಯರಾದ ಸರಸ್ವತಿ, ಶ್ರೀಲತಾ, ಸೆಲಿನ್ ಬಾರೆಟ್ಟೊ ಶಿಕ್ಷೇತರ ಸಿಬಂದಿ ಪ್ರತಿಮಾ, ರೂಪಾ ಸಂತ ಜೋಸೆಫ್ ಹಿರಿಯ ಪ್ರಾ. ಶಾಲೆಯ ಶಿಕ್ಷಕರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ವಿನಾಯಾ ಡಿಕೋಸ್ತಾರ ಮಕ್ಕಳು ಕುಟುಂಬದವರು, ವಿದ್ಯಾರ್ಥಿಗಳು ಬಿಸಿಯೂಟ ಸಿಬಂದಿಗಳು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ, ಸ್ವಾಗತಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿನಯಾ ಡಿಕೋಸ್ತಾ ಶಾಲೆಗೆ ಸುಮಾರು 50 ಸಾವಿರ ಬೆಲೆ ಬಾಳುವ ಯುನಿವರ್ಟರನ್ನು ಕೊಡುಗೆ ನೀಡಿ, ತಾವು 13 ಮುಖ್ಯೋಪಾಧ್ಯಾಯಿನರ ಜೊತೆ ಸೇವೆ ನೀಡಿದ ಮುಖ್ಯೋಪಾಧ್ಯಾನಿಯರನ್ನು ಸ್ಮರಿಸಿ, ತಮ್ಮ ಸೇವಾಧಿಯಲ್ಲಿ ತಮಗೆ ಸಹಕಾರ ನೀಡಿದವರೆಲ್ಲರಿಗೆ ಕ್ರತಜ್ಞತೆ ಸಲ್ಲಿಸಿ, ಸರ್ವರಿಗೂ ವಂದನೆ ಸಲ್ಲಿಸಿದರು.