JANANUDI.COM NETWORK
ಕುಂದಾಪುರ,ಮಾ.19: ‘ಸಂತ ಜೋಸೆಫರು ಮಾತನಾಡಿದ್ದು ಕಡಿಮೆ, ಆತ ದೇವರಿಗೆ ಮಾತನಾಡಲು ಬಿಟ್ಟು, ದೇವರು ಮಾತನಾಡಿದ್ದನ್ನು (ಆದೇಶಿಸಿದ್ದನ್ನು) ತಾನು ಪ್ರಮಾಣಿಕವಾಗಿ ಪಾಲನೆ ಮಾಡಿದ ಮಹಾ ಸಂತ, ಕೆಲವರು ರಂಗದ ಮುಂದೆ ಪ್ರದರ್ಶನ ನೀಡುತ್ತಾರೆ, ನಮ್ಮ ಕಣ್ಣಿಗೆ ಅವರೆ ಪ್ರಾಮುಖ್ಯರು ಅಂದೆನ್ನಿಸುತ್ತದೆ, ಆದರೆ ರಂಗಸ್ಥಳದ ಹಿಂದೆ ಪ್ರದರ್ಶನ ಯಶಸ್ವಿಯಾಗಲು, ಪರದೆಯ ಹಿಂದುಗಡೆ ಶ್ರಮವಹಿಸಿದವರು ಅನೇಕರಿರುತ್ತಾರೆ. ಹಾಗೇ ದೇವರ ಯೋಜನೆ ಮೇರಿ ಮತ್ತು ಯೇಸುಕ್ರಿಸ್ತನ ಮುಖಾಂತರ ಯಶಸ್ಸು ಗೊಳಿಸುವ ಯೋಜನೆಯ ಹಿಂದೆ, ಸಂತ ಜೋಸೆಫರ ಶ್ರಮ ತ್ಯಾಗ ಬಹಳಷ್ಟಿದೆ, ದೇವರ ಯೋಜನೆ ಸಾಕಾರವಾಗಲು ಸಂತ ಜೋಸೆಫರ ಪಾತ್ರ ಬಹುದೊಡ್ಡದು. ಜಗತ್ ಗುರು ಪೆÇೀಪ್‍ರವರು ಈ ವರ್ಷವನ್ನು ಸಂತ ಜೋಸೆಫರಿಗೆ ಸಮರ್ಪಿಸಿದ್ದಾರೆ. ದೇವಪಿತನಲ್ಲಿ ಕಂಡು ಬರುವ ದೇವತಾ ಗುಣಗಳನ್ನು ನಾವು ಸಂತ ಜೋಸೆಫರಲ್ಲಿ ಕಾಣಬಹುದು’ ಎಂದು ಕುಂದಾಪುರದ ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಸಂದೇಶ ನೀಡಿದರು.
ಅವರು ಕುಂದಾಪುರ ಕಾನ್ಚೆಂಟ್ ನಲ್ಲಿ ಯೇಸು ಕ್ರಿಸ್ತನ ಪಾಲಕ ಸಂತ ಜೋಸೆಫರ ಹಬ್ಬದ ಬಲಿದಾನದ ಸಂದರ್ಭ ಸಂದೇಶ ನೀಡಿದರು. ಕುಂದಾಪುರದ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಬಲಿದಾನದಲ್ಲಿ ಭಾಗಿಯಾದರು. ಈ ಬಲಿದಾನದಲ್ಲಿ ಸಂತ ಜೋಸೆಫ್ ಅವರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟಿನ ಕಾರ್ಮೆಲ್ ಮೇಳದ ಧರ್ಮಭಗಿನಿಯರು ಹಾಗೂ ಅತಿಥಿ ಧರ್ಮ ಭಗಿನಿಯರು, ಕಾರ್ಮೆಲ್ ಮೆಳದ ಭಗಿನಿಯರ ಸಹಾಯಕರಾದ ಬ್ಲೊಸಮ್ ಪಂಗಡವರು, ಜೊತೆಗೆ ಹಲವಾರು ಭಕ್ತಾಧಿಗಳು ಪಾಲ್ಗೊಂಡರು. ಕಾನ್ವೆಂಟಿನ ಮುಖ್ಯಸ್ಥೆ ಸಿ|ಸಂಗೀತ ವಂದಿಸಿದರು