

ಮಂಗಳೂರು: ಉರ್ವಾದ ಕನ್ನಡ ಮಾಧ್ಯಮ ಪೊಂಪೈ ಪ್ರೌಢಶಾಲೆಗೆ 60 ವರ್ಷದ ಇತಿಹಾಸವಿದ್ದು, ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ 100 ಶೇಕಡ ಫಲಿತಾಂಶ ಬಂದಿದೆ. ಇದೊಂದು ಹೆಮ್ಮೆಯ ವಿಷಯ ಈ ಶಾಲೆಯು ಕನ್ನಡ ಮಾಧ್ಯಮದ ಶಾಲೆಯಾಗಿದ್ದು, ಹೆಚ್ಚಿನ ಅಂದರೆ 99 ಶೇಕಡ ವಿದ್ಯಾರ್ಥಿಗಳು ವಲಸೆ ವಿದ್ಯಾರ್ಥಿಗಳಾಗಿದ್ದು, ತುಂಬಾ ಹಿಂದುಳಿದ ಕುಟುಂಬದ ಹಿನ್ನೆಲೆಯಲ್ಲಿ ಬಂದಂತಹ ವಿದ್ಯಾರ್ಥಿಗಳು ಆದರೂ ಶಿಕ್ಷಕರ ಉತ್ತಮ ಶಿಕ್ಷಣ ಕಾಳಜಿಯಿಂದ ಈ ವರ್ಷದಲ್ಲಿ ನೂರು ಶೇಕಡ ಫಲಿತಾಂಶ ಬಂದಿರುವುದು ಬಂದಿದೆ.
ಈ ಕಾರಣಕ್ಕೆ ಶಿಕ್ಷಕರಿಗೆ ಆಡಳಿತ ವರ್ಗದವರಿಗೆ ತುಂಬು ಸಂತೋಷವಾಗಿದೆ.
ಇತ್ತೀಚೆಗೆ ಈ ಶಾಲೆಯನ್ನು ಒಳ್ಳೆಯ ಉದ್ದೇಶದಿಂದ ಶಾಲೆಯ ಕಟ್ಟಡವನ್ನು ಕಟ್ಟಿದವರ ಕುಟುಂಬಸ್ಥರು ಈ ಶಾಲೆಯ ಕಾಳಜಿಯಿಂದ ಆಸ್ಟ್ರೇಲಿಯದಿಂದ ಬಂದು ಭೇಟಿ ಕೊಟ್ಟಿದ್ದರು ಎಂದು ಶಿಕ್ಷಕಿ ಲೀನಾ ಸಂತಾನೇಜ್ ಹೇಳುತ್ತಾರೆ.

