ಬೆಂಗಳೂರು, ಜುಲೈ, 18 ರಂದು ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರೆ ಸಾಕು ಉತ್ತೀರ್ಣ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಶಾಲೆಗಳು ಕೊಡುವ ಮೌಲ್ಯಾಂಕನ ಮತ್ತು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನು ಆಧರಿಸಿ ಈ ಬಾರಿ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಲಾಗುತ್ತದೆ.
ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಕನಿಷ್ಟ ಅಂಕ ನೀಡಿ ಈ ಬಾರಿ ಉತ್ತೀರ್ಣಗೊಳಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅನುತ್ತೀರ್ಣದ ಆತಂಕವಿಲ್ಲ.
ಕೊರೊನಾ ಪರಿಸ್ಥಿತಿಯಲ್ಲಿ 6 ವಿಷಯಗಳಿಗೆ ಪರೀಕ್ಷೆ ನಡೆಸಿದ್ರೆ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 6 ದಿನಗಳು ಬರುವುದು ಕಷ್ಟವಾಗುತ್ತೆ. ಆದ್ರೆ ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಮುಖ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಎರಡು ದಿನಗಳಲ್ಲಿ(ಒಂದು ದಿನ ಕೋರ್ ವಿಷಯಗಳು ಮತ್ತು ಇನ್ನೊಂದು ದಿನ ಭಾಷಾ ವಿಷಯಗಳು) ಪರೀಕ್ಷೆಯನ್ನು ನಡೆಸಲಾಗುವುದು. ಇನ್ನು ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೂ ನಿಯಮಾನುಸಾರ ಕನಿಷ್ಠ ಉತ್ತೀರ್ಣತಾ ಅಂಕಗಳನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಮಾರ್ಗಸೂಚಿಗಳು …
- ಈ ಬಾರಿ 6 ಸಾವಿರಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳು
- ವಿದ್ಯಾರ್ಥಿಗಳ ನಡುವೆ ಆರು ಅಡಿ ಅಂತರ ಕಡ್ಡಾಯವಿದೆ
- ಪ್ರತಿ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 100 ವಿದ್ಯಾರ್ಥಿಗಳಿಗೆ ಅವಕಾಶ ಮಾತ್ರ
- ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಅವಕಾಶ ಮಾತ್ರ
- ತಲಾ 40 ಅಂಕಗಳ ಒಟ್ಟು 120 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು
- ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಯೇ ಪರೀಕ್ಷೆ ಹಾಜರತಿ
- ಒಟ್ಟು 03 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆ ಪತ್ರಿಕೆ
- ಪರೀಕ್ಷೆಯ ಸಮಯ ಬೆಳಗ್ಗೆ 10.30 ರಿಂದ 1.30 ವರೆಗೆ
- ಕೋರ್ ಮತ್ತು ಭಾಷಾ ವಿಷಯಗಳ ಪರೀಕ್ಷೆಗಳ ನಡುವೆ ಅಂತರ
- OMR ರೂಪದಲ್ಲಿ ಉತ್ತರ ಪತ್ರಿಕೆ
- ಜಿಟಿಎಸ್ (ಜ್ಯುನಿಯರ್ ಟೆಕ್ನಿಕಲ್ ಸ್ಕೂಲ್) ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಮತ್ತು ಥಿಯೆರಿ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸಲಾಗುವುದು
ಪರೀಕ್ಷಾ ಫಲಿತಾಂಶ:
- ನಿಯಮಾನುಸಾರ ಯಾರನ್ನೂ ಫೇಲ್ ಮಾಡುವುದಿಲ್ಲ
- ಅಂಕಗಳ ಆಧಾರದ ಮೇಲೆ ಗ್ರೇಡ್ ನೀಡಲಾಗುವುದು
- 90 ರಿಂದ 100 ಅಂಕ ಪಡೆದರೆ ಎ+ ಗ್ರೇಡ್
- 80 ರಿಂದ 89 ಅಂಕ ಪಡೆದರೆ ಎ ಗ್ರೇಡ್
- 60 ರಿಂದ 79 ವರೆಗೆ ಅಂಕ ಪಡೆದರೆ ಬಿ ಗ್ರೇಡ್
- 5 35 ರಿಂದ 59 ವರೆಗೆ ಸಿ ಗ್ರೇಡ್