ಎಸ್.ಎಸ್.ಎಲ್.ಸಿ ಫಲಿತಾಂಶ: ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ “ಎ” ಗ್ರೇಡ್

JANANUDI.COM NETWORK


ಕುಂದಾಪುರ,ಅ.11:ಎಸ್.ಎಸ್.ಎಲ್.ಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯು ಶಾಲಾವಾರು ಫಲಿತಾಂಶದ ಗುಣಮಟ್ಟದಲ್ಲಿ “ಎ” ಗ್ರೇಟ್ ಪಡೆದಿದೆ.ವಿದ್ಯಾರ್ಥಿಗಳಾದ ಸ್ವಾತಿ ಸಿ.ಎಂ ಶೇ.96.80 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ವೃದ್ಥಿ ಶೆಟ್ಟಿ ಶೇ.96.32 ಅಂಕ ಪಡೆದು ದ್ವಿತೀಯ ಸ್ಥಾನ, ಪ್ರಥ್ವಿಕ್ ಪಿ ಶೇ.95 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಸಂಚಾಲಕರೂ, ಕುಂದಾಪುರ ವಲಯದ ಧರ್ಮಗುರುಗಳು ಆದ ಅತೀ ವಂ.ಫಾ.ಸ್ಟ್ಯಾನಿ ತಾವ್ರೋ, ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.