ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಮುಂದಿನ ಭವಿಷ್ಯತ್ತಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವನ್ನು ( ಎ.ಪಿ.ಎಂ.ಸಿ ) ಇನ್ನು 75 ಎಕರೆ ವಿಸ್ತಾರ ಮಾಡುವ ಚಿಂತನೆ ಇದೆ ಇದಕ್ಕೆ ಪ್ರಾಂಗಣದ ಆಜೂ – ಬಾಜೂನಲ್ಲಿರುವ ಜಮೀನು ಮಾಲೀಕರ ಸಹಕಾರ ಅಗತ್ಯವಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರು ತಿಳಿಸಿದರು . ಎಂ.ಪಿ.ಎಂ.ಸಿ ಪ್ರಾಂಗಣದಲ್ಲಿ ಬುಧವಾರ ೪.೧೬ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಸ್ತುತವಿರುವ ಎ.ಪಿ.ಎಂ.ಸಿ ಯಾರ್ಡ್ ಜೊತೆಗೆ ಇನ್ನಷ್ಟು ವಿಸ್ತಾರಪಡಿಸಲು ಯೋಜನೆ ರೂಪಿಸಬೇಕಾಗಿದೆ ಇಲ್ಲಿನ ಜಮೀನಿನ ಮಾಲೀಕರು ಮನಸ್ಸು ಮಾಡಿದರೆ ಅದನ್ನು ಕ್ರಿಯಾ ರೂಪಕ್ಕೆ ತರಲಾಗುವುದು ಜಮೀನಿನ ಖಾತೆ ಅವರದೇ ಆಗಿರಲಿ ಮಾರ್ಕೆಟ್‌ಗಳನ್ನು ಮಾತ್ರ ಅಭಿವೃದ್ಧಿಪಡಿಸಲಿ ಇದು ಎಲ್ಲಾ ರೈತರಿಗೂ ಸಹಕಾರಿಯಾಗುತ್ತದೆ ಎಂದರು . ಮುಂದಿನ ಸಂಕ್ರಾತಿ ಹಬ್ಬಕ್ಕೆ ಕಸಬಾ ಹೋಬಳಿಯ ಎಲ್ಲಾ ಕೆರೆಗಳು ಕೆ.ಸಿ ವ್ಯಾಲಿ ನೀರಿನಿಂದ ತುಂಬಲಿವ ತದನಂತರ ಯಲ್ಲೂರು ಹೋಬಳಿ ಕರೆಗಳಿಗೆ ನೀರು ಹರಿಸುವ ಕೆಲಸ ಮುಂದುವರೆಯುತ್ತದೆ ಆಗ ನಬಾರ್ಡ್ ಮತ್ತು ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಆರ್ಥಿಕ ನೆರವು ನೀಡಿ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವ ವೈಜ್ಞಾನಿಕ ಪದ್ಧತಿಯ ಬಗ್ಗೆ ಅರಿವು ಮೂಡಿಸುವುದು , ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಯನ್ನು ಮಾಡುತ್ತಿರುವುದರಿಂದ ಮಾರುಕಟ್ಟೆ ವ್ಯವಸ್ಥೆಯು ಯಾವುದೇ ಅಡಚಣೆ ಇಲ್ಲದೇ ಸರಕು ಸಾಗಾಣಿಕೆಯನ್ನು ಮಾಡಿಕೊಳ್ಳಬಹುದು ರೈತರ ಅಭಿವೃದ್ಧಿಯಲ್ಲಿ ಪಕ್ಷ , ಪಂಗಡ , ಜಾತಿ ಬೇದವಿಲ್ಲ . ಭೂಮಿಯನ್ನು ನಂಬಿ ಜೀವನ ಮಡುವ ಪ್ರತಿಯೊಬ್ಬರನ್ನು … ರೈತರಂತೆ ನೋಡಬೇಕು ಇದರಲ್ಲಿ ಯಾವುದು ಇದರಲ್ಲಿ ಯಾವುದು ಬೇದಬಾವ ಮಾಡದೇ ರೈತರ ಹಿತವನ್ನು ಕಾಪಾಡಬೇಕೆಂದರು . ಎಂ.ಪಿ.ಎಂ.ಸಿ ಪ್ರಾಂಗಣದಲ್ಲಿ ಈಗ ಹಮ್ಮಿಕೊಂಡಿರುವ ೪.೧೬ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ರಸ್ತೆ , ಚರಂಡಿ , ಶೌಚಾಲಯಗಳನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚಿಸಿ ಉಳಿದ ಅಗತ್ಯ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿಯೆಂದು ಇಂಜನಿಯರ್‌ಗೆ ತಿಳಿಸಿದರು . ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ರಮೇಶ್ ಬಾಬು , ಉಪಾಧ್ಯಕ್ಷ ರಾಜಣ್ಣ , ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್‌ರೆಡ್ಡಿ , ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ , ಪರಸಭಾ ಸದಸ್ಯರಾದ ಉನಿಕಿಲಿ ನಾಗರಾಜ್ , ಅನಿಸ್ ಅಹಮದ್ , ಎಪಿಎಂಸಿ ನಿರ್ದೇಶಕರಾದ ಯೋಗೇಂದ್ರಗೌಡ , ಪೆಪ್ಪರೆಡ್ಡಿ , ಗುತ್ತಿಗೆದಾರ ಜಾಮಚೆಟ್ಟಲು ಶ್ರೀನಿವಾಸರೆಡ್ಡಿ , ದಿಂಬಾಲ ವೆಂಕಟಾದ್ರಿ , ಸಾಮಾಜಿಕ ಜಾಲತಾಣದ ಅಧ್ಯಕ್ಷ ವೇಣು , ಹರೀಶ್‌ಯಾದವ್ , ಯುತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥರೆಡ್ಡಿ , ಮುಖಂಡರಾದ ಪಾಳ್ಯ ಗೋಪಾಲರೆಡ್ಡಿ , ಗಂಗಾಧರ್ , ಚಂದ್ರಪ್ಪ , ಅಪ್ಯೂರೊಳ್ಳು ವೆಂಕಟೇಶ್ , ಆನಂದ್ , ಇನ್ನಿತರರು ಹಾಜರಿದ್ದರು .