ಶ್ರೀನಿವಾಸಪುರ : ರೈತನು ದೇಶದ ಬೆನ್ನೆಲುಬು ಎಂದು ಬೆನ್ನೆನ್ನೇ ಮುರಿಯಲು ಹೊರಟ ಸರ್ಕಾರದ ಅರ್ಥಿಕ ನೀತಿಗಳ ವಿರುದ್ಧ ನಾವುಗಳು ಒಂದಾಗದೆ ಇದಲ್ಲಿ ಕೆಲವೇ ವರ್ಷಗಳಲ್ಲಿ ಜಮೀನನ್ನೆ ನಂಬಿಕೊಂಡು ಜೀವನ ಮಾಡುತ್ತಿರುವ ರೈತರು ತಮ್ಮ ಜಮೀನುಗಳನ್ನು ಕಾರ್ಪೊರೇಟ್ಗಳಿಗೆ ಒಪ್ಪಿಸಿ ಅವರ ಬಳಿ ದಿನಗೂಲಿಯಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾದ ರೈತರ ಸಂಕಲ್ಪ ಯಾತ್ರೆಯಲ್ಲಿ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ರವರ ಮೂಲಕ ಸರ್ಕಾರಕ್ಕೆ ರವಾನಿಸುವಂತೆ ಉಪತಹಶೀಲ್ದಾರ್ ಕೆ.ಎಲ್.ಜಯರಾಮ್ರವರಿಗೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿತ್ತು ಅಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಆ ಸಭೆಗೆ ಗೈರು ಹಾಜರಾಗಿದ್ದರು. ನಂತರ 2 ನೇ ಸಭೆ ಕರೆಯದೆ, ಈ ಮಧ್ಯೆ ಅವೈಜ್ಞಾನಿಕ ಸಾಲ ವಸೂಲಾತಿ ನೀತಿಯನ್ನು ಅನುಸರಿಸುತ್ತಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಸಾಲ ವಸೂಲಾತಿ ನ್ಯಾಯ ಮಂಡಲಿಯಲ್ಲಿ (ಡಿಆರ್ಟಿ) ವಿವಿಧ ನ್ಯಾಯಾಲಯಗಳಲ್ಲಿ ಸಾಲಗಾರ ರೈತರ ಮೇಲೆ ದಾವೆಗಳನ್ನು ಹೂಡಿದ್ದರಿಂದ ರೈತರ ಬಾಗಿಲಿಗೆ ನೋಟಿಸ್ಗಳು ಬರುತ್ತಿದ್ದು, ಅದರಲ್ಲಿ ಸಾಲಕ್ಕಿಂತ 4 ಪಟ್ಟು ಹೆಚ್ಚು ಜಮಾ ಮಾಡುವಂತೆ ತಿಳಿಸಲಾಗುತ್ತಿದೆ . ಇದರಿಂದ ರೈತರು ಕಂಗಾಲು ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ರೈತರ ವಿರುದ್ಧ ವಸೂಲಾತಿಗೆ ಕೋರ್ಟ್ಗೆ ಹಾಕುವುದು ಮಾನದಂಡೆನೆ ವಿಧಿಸಲಾಗುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿರುವ ವಿತ್ತ ಮಂತ್ರಿಗಳು ರೈತರಿಗೆ ನೋಟಿಸ್ ಕೂಡಿ, ಸಾಲ ವಸೂಲತಿ ಮಾಡಿ ಎಂದು ಬ್ಯಾಂಕ್ಗೆ ಹೇಳುತ್ತಿರುವುದು ಸರಿಯಲ್ಲ. ರೈತರನ್ನು ಹಗುರವಾಗಿ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಅತಿವೃಷ್ಟಿ , ಅನಾವೃಷ್ಟಿಯಿಂದ ರಾಜ್ಯದಲ್ಲಿನ ರೈತರು ತುಂಬಾ ಸಾಲಗಾರರಾಗಿದ್ದಾರೆ. ಹಣಕಾಸು ಮಂತ್ರಿ ನಿರ್ಮಲಸೀತಾರಾಮನ್ರವರು ಬಳ್ಳಾರಿಯಲ್ಲಿ ಖಾಸಗಿ ಕಂಪನಿಯ 58.121 ಕೋಟಿ ಸಾಲ ಮನ್ನಾ ಮಾಡಿದ್ದಾರೆ . ಆದರೆ, ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಕೇವಲ 26 ಸಾವಿರ ಕೋಟಿ ಇದ್ದು ಸಾಲ ಮನ್ನ ಮಾಡಿಲ್ಲ ಎಂದು ಟೀಕಿಸಿದರು.
ಮಾರ್ಚ್ 28 ರ ಒಳಗೆ ರೈತರ ಸಾಲದ ಬಗ್ಗೆ ಇತ್ಯರ್ಥವಾಗದಿದ್ದರೆ 28 ನೇ ತಾರೀಖು ರಂದು ಬಳ್ಳಾರಿಯಲ್ಲಿ ಗ್ರಾಮೀಣ ಬ್ಯಾಂಕಿನ ಕೇಂದ್ರ ಕಛೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿ, ಅದರೊಳಗಡೆ ರೈತರು ಏನಾದರೂ ಅನಾಹುತ ಮಾಡಿಕೊಂಡರೆ ಕೇಂದ್ರ , ರಾಜ್ಯ, ಗ್ರಾಮೀಣ ಬ್ಯಾಂಕ್ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಆರ್ಐ ಜನಾರ್ಧನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ತಿಮ್ಮಾರೆಡ್ಡಿ, ರಾಜಶೇಖರರೆಡ್ಡಿ, ಬಸವರಾಜಸ್ವಾಮಿ, ಉಮಾಪತಿಗೌಡ, ಬಸವರಾಜು, ನಾಗರಾಜಗೌಡ, ಸಲೀಂ, ಓಂಕಾರಗೌಡ, ಭುವನಗೌಡ, ಭಾಸ್ಕರರಾವ್, ಶ್ರೀನಿವಾಸ್, ಇದ್ದರು.