ಶ್ರೀನಿವಾಸಪುರ : ಪ್ರಧಾನ ಮಂತ್ರಿ ನರೇಂದ್ರ ಮೋದಿರವ ನೇತೃತ್ವದಲ್ಲಿನ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಪ್ರತಿ ಹಳ್ಳಿಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಮಾಹಿತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಲಿದ್ದೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್ ಮಾಹಿತಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ಬೂತ ಮಟ್ಟದಲ್ಲಿ ಅಧ್ಯಕ್ಷರನ್ನ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಶಕ್ತಿ ಕೇಂದ್ರಗಳನ್ನು ಹಾಗೂ ಮಹಾಶಕ್ತಿ ಕೇಂದ್ರಗಳನ್ನು ಮಾಡಲು ಪಕ್ಷವು ಅವಕಾಶ ನೀಡಿದೆ. ಇವೆಲ್ಲದರ ಮೂಲಕ ಪಕ್ಷ ಸಂಘಟನೆ ಮಾಡಿ ಪಕ್ಷದ ಚಿಂತನೆಗಳನ್ನು ಮತದಾರ ಬಳಿ ತಿಳಿಸಿ ಪಕ್ಷವನ್ನು ಸಂಘಟನೆ ಮಾಡಲಾಗುವುದು.
12 ನೇ ತಾರೀಖು ಪಟ್ಟಣದ ಹೊರವಲಯದ ಕನಕ ಭವನದಲ್ಲಿ ತಾಲೂಕಿನಲ್ಲಿ ಕಾರ್ಯಕರ್ತರಿಗೆ ಜವಾಬ್ದಾರಿಗಳನ್ನು ಮಾಡಿಸುವ ಪದಗ್ರಹಣ ಮಾಡಲಿದ್ದು, ಅಂದು ಸಂಸದ ಮುನಿಸ್ವಾಮಿ, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಕೇಶವ ಪ್ರಸಾದ್, ಜಿಲ್ಲಾಧ್ಯಕ್ಷ ಕೆ.ಎನ್.ವೇಣೂಗೋಪಾಲ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ವೈ.ಸಂಪಗಿ, ಮಂಜುನಾಥಗೌಡ, ಬಿ.ಪಿ.ವೆಂಕಟಮುನಿಯಪ್ಪ, ಹಾಗು ಪಕ್ಷದ ಹಿರಿಯ ನಾಯಕರು ಪಾಲ್ಗುಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕಿನ ಮಂಡಲ ಉಪಾಧ್ಯಕ್ಷರನ್ನಾಗಿ ಶ್ರೀನಾಥಬಾಬು, ನರಸಿಂಹನಾಯಕ, ಹೆಚ್.ಆರ್.ನಾರಾಯಣಸ್ವಾಮಿ, ರಾಜಶೇಖರ್, ನಲ್ಲಪಲ್ಲಿ ರೆಡ್ಡಪ್ಪ, ಬಾಬು ರೆಡ್ಡಿ, ಮಂಜುನಾಥರೆಡ್ಡಿ, ಶಂಕರರೆಡ್ಡಿ, ರಾಜೇಶ್, ವೆಂಕಟರಮಣಪ್ಪ, ನಟರಾಜ್, ಪ್ರಬಾಕರ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಎಸ್.ರಾಜು, ಶೆಟ್ಟಿಹಳ್ಳಿ ನಾಗಭೂಷನ್, ಮಂಡಲ ಖಾಜಾಂಚಿ ಟಿ.ಎಂ.ರವಿ, ಯುವ ಮೋರ್ಚಾ ಅಧ್ಯಕ್ಷರಾಗಿ ಹೆಚ್.ಎ.ಶಿವಾರೆಡ್ಡಿ, ಎಸ್ಸಿ. ಮೋರ್ಚಾ ಅಧ್ಯಕ್ಷರಾಗಿ ಹೆಚ್.ವಿ.ನಾಗರಾಜ್, ರೈತ ಮೋರ್ಚಾ ಎಸ್.ನಾಗರಾಜರೆಡ್ಡಿ, ಎಸ್ಟಿ ಮೋರ್ಚಾ ಎಸ್.ಆರ್.ಹರಿಕೃಷ್ಣ, ಓಬಿಸಿ ಮೋರ್ಚಾ ಶೀಗೆಹಳ್ಳಿ ಮಂಜುನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆ ನವೀನಕುಮಾರಿ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಷೇಕ ಶಫಿವುಲ್ಲಾ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.