ಶ್ರೀನಿವಾಸಪುರ : ಸಂವಿಧಾನ ಕಲ್ಪಿಸಿರುವ ಹಕ್ಕುಗಳಲ್ಲಿ ಮತದಾನ ಕೂಡ ಶ್ರೇಷ್ಟವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.
ಪಟ್ಟಣದ ಪುರಸಭೆ ಕಛೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರು ಅರಿತು ಮತದಾನದಲ್ಲಿ ಕ್ರಿಯೆಯಲ್ಲಿ ಪಾಲ್ಗುಳ್ಳಬೇಕು. ಭಾರತದೇಶದಲ್ಲಿ ವ್ಯಕ್ತಿ ಮತ್ತು ಪಕ್ಷವನ್ನು ನೋಡಿ ಮತಚಲಾಯಿಸುತ್ತಾರೆ. ವ್ಯಕ್ತಿ ಮತ್ತು ಪಕ್ಷವನ್ನು ನೋಡಿ ದೇಶವನ್ನ ಅಭಿವೃದ್ಧಿಯತ್ತಾ ಕೊಂಡಯ್ಯುವ ಆದರ್ಶ ನಾಯಕನನ್ನು ಆಯ್ಕೆ ಮಾಡುವುದರಲ್ಲಿ ಯುವ ಮತದಾರರು ಮುಂದಾಗಬೇಕು ಆಗ ದೇಶವು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ ಮಾತನಾಡಿ ಅಂಬೇಡ್ಕರ್ರವರು ರಚನೆ ಮಾಡಿರುವ ಸಂವಿದಾನದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುವುದರಿಂದ ಮತದಾರರು ಯಾವುದೇ ಆಸೆ, ಆಕಾಂಕ್ಷೆಗಳು ಇಲ್ಲದೆ ಮತವನ್ನ ಚಲಾಯಿಸಬೇಕು. ನಿಮ್ಮ ಒಂದು ಮತ ದೇಶದ ಅಭಿವೃದ್ಧಿಯತ್ತಾ ಕೊಂಡಯ್ಯೋಲು ಸಾಧ್ಯವಾಗುತ್ತದೆ ಎಂದರು. ಇದರಿಂದ ನಮ್ಮ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲಿದೆ ಎಂದರು.
ಪುರಸಭೆ ಮುಖ್ಯ ಅಧಿಕಾರಿ ವೈ.ಎನ್.ಸತ್ಯನಾರಾಯಣ್ ಮಾತನಾಡಿ 18ವರ್ಷ ತುಂಬಿದ ಪ್ರತಿಯೊಬ್ಬರ ಮತದಾರನು ಮತಚಲಾಯಿಸಬೇಕು ಎನ್ನುತ್ತಾ ಮತದಾನದ ಬಗ್ಗೆ ಅರಿವು ನೀಡಿದರು.
ಈ ಕಾರ್ಯಕ್ರಮದಲ್ಲಿ ಉತ್ತಮ ಇಸಿಎಲ್ ಆಗಿ ಆಯ್ಕೆಯಾಗಿರುವ ಜಿ.ಕೆ.ನಾರಾಯಣಸ್ವಾಮಿ ಸನ್ಮಾನಿಸಲಾಯಿತು. ಮತದಾನದ ಬಗ್ಗೆರ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಸಾಪ ತಾಲೂಕು ಅಧ್ಯಕ್ಷೆ ಪಿ.ಎಸ್.ಮಂಜುಳ, ಕಂದಾಯ ಅಧಿಕಾರಿಗಳಾದ ವಿ.ನಾಗರಾಜ್, ಮಂಜುನಾಥ್, ಕಂದಾಯ ನಿರೀಕ್ಷಕ ಎನ್.ಶಂಕರ್, ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್, ಶಿಕ್ಷಕ ರಮೇಶ್, ನಿವೃತ್ತ ಶಿಕ್ಷಕ ವಿ.ತಿಪ್ಪಣ್ಣ, ಚುನಾವಣಾ ಸಿಬ್ಬಂದಿ ಅಭಿಷೇಕ್ಬಾಬು, ಸೋಮಶೇಖರ್, ಪುರಸಭಾ ಸಿಬ್ಬಂದಿಗಳಾದ ಪ್ರತಾಪ್, ಶಿವಪ್ರಸಾದ್, ಗೌತಮ್, ಸುರೇಶ್, ಸಂತೋಷ್ ಇದ್ದರು.