ಶ್ರೀನಿವಾಸಪುರ : ಪಟ್ಟಣದಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಮತದಾನವು ಶಾಂತಿಯುತವಾಗಿ ನಡೆಯಿತು. ಶೇಕಡ 96.44 % ರಷ್ಟು ನಡೆಯಿತು.
ಈ ಸಮಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ|| ವೇಣುಗೋಪಾಲ್ ಮಾತನಾಡಿ ವೈ.ಎ.ಎನ್ ರವರು ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇಂತಹ ವ್ಯಕ್ತಿಯನ್ನು ಚುನಾವಣೆಯಲ್ಲಿ ಎಲ್ಲಾ ಶಿಕ್ಷಕರ ಸಹ ಗೆಲ್ಲಿಸುವ ನಿರ್ಧಾರ ಮಾಡಿರುವುದು ಹೆಮ್ಮೆಯ ವಿಚಾರ . ತಾಲೂಕಿನಲ್ಲಿ ಒಟ್ಟು 731 ಮತಗಳಿದ್ದು, ಎಲ್ಲಾ ಶಿಕ್ಷಕರು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ರವರಿಗೆ ಮೊದಲ ಪ್ರಾಸ್ತ್ಯ ನೀಡುವುದರ ಮೂಲಕ ಗೆಲ್ಲಿಸುತ್ತಾರೆ ಎಂದು ಭರವಸೆ ನೀಡಿದರು.
ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್, ಜೆಡಿಎಸ್ ಪಕ್ಷದ ಮುಖಂಡರಾದ ಲಾಯರ್ ಕುಂದಿಟವಾರಿಪಲ್ಲಿ ಶಿವಾರೆಡ್ಡಿ, ಲಕ್ಷ್ಮಣಗೌಡ, ವಕೀಲ ನಾಗರಾಜ್, ಈ .ಶಿವಣ್ಣ, ನಲ್ಲಪಲ್ಲಿ ರೆಡ್ಡಪ್ಪ, ಗೌನಿಪಲ್ಲಿ ರವಿಕುಮಾರ್, ಸುಬ್ಬಿರೆಡ್ಡಿ, ರಾಮಚಂದ್ರೇಗೌಡ, ಯಲ್ದೂರು ಮಣಿ, ಪಾಳ್ಯ ಗೋಪಾಲರೆಡ್ಡಿ ಇದ್ದರು.
ಕಾಂಗ್ರೆಸ್ ಪಕ್ಷದ ಮುಖಂಡ ಸಂಜಯ್ರೆಡ್ಡಿ ಮಾತನಾಡಿ ವೈ.ಎ.ನಾರಾಯಣಸ್ವಾಮಿ ರವರು ಇದುವರೆಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ರವರು ಮತಹಾಕುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿ ಇರವುದರಿಂದ ಶಿಕ್ಷಕರ ಸಮಸ್ಯೆಗಳು ಅತಿ ಶೀಘ್ರವಾಗಿ ಬಗೆಹರಿಯಲು ಸಾಧ್ಯ ವಾಗುತ್ತದೆ ಎಂದರು. ಆದ್ದರಿಂದ ಶಿಕ್ಷಕರು ಶ್ರೀನಿವಾಸ್ ರವರಿಗೆ ಮೊದಲ ಪ್ರಾಸ್ತ್ಯ ಮತವನ್ನು ಹಾಕುವಂತೆ ಮನವಿ ಮಾಡಿದರು.
ಮುಖಂಡರಾದ ವೆಂಕಟೇಶ್, ಗೌನಿಪಲ್ಲಿ ಬಕ್ಷುಸಾಬ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್, ಸದಸ್ಯ ಸತ್ಯನಾರಾಯಣ, ಹೊಗಳಗರೆ ಆಂಜಿ, ಬಾಸ್ಕರ್, ದಳಸನೂರು ಉಮಾದೇವಿ ಇದ್ದರು.
ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಪರ ಮುಖಂಡ ರಮೇಶ್ ಮಾತನಾಡಿ ಕಳೆದ ಒಂದು ವರ್ಷದಿಂದ ವಿನೋದ್ ಶಿವರಾಜ್ ರವರು ಆಗ್ನೇಯ ಶಿಕ್ಷಕರ ಕ್ಷೇತ್ರದ ಎಲ್ಲಾ ಶಿಕ್ಷಕರೊಂದಿಗೆ ಸಮಾಲೋಚಿಸಿ ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದು, ಶಿಕ್ಷಕರು ಬದಲಾವಣೆ ಕೊರುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ವಿನೋದ್ ಶಿವರಾಜ್ ರವರಿಗೆ ಒಮ್ಮೆ ಅವಕಾಶ ನೀಡಲು ಮನವಿ ಮಾಡಿದರು.
ತಿರುಮಳೇಶ್ , ಶಶಿಕುಮಾರ್, ಚಿರಂಜೀವಿ, ಚಂದ್ರು, ರವಿ ಇದ್ದರು.