

ಶ್ರೀನಿವಾಸಪುರ 3 : ವಿವೇಕಾನಂದರು ಯುವಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಹೇಳಿದರು.
ಪಟ್ಟಣದ ಬಾಲಕೀಯರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶ್ರೀನಿವಾಸಪುರ ಘಟಕವತಿಯಿಂದ ರಾಷ್ಟೀಯ ಯುವಕರ ದಿನ ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಾತ್ಮದ ಮೂಲಕ ತನ್ನ ಮನಸ್ಥಿತಿಯನ್ನು ಸಮತೋಲನವಾಗಿ ಇಟ್ಟುಕೊಳ್ಳಲು ಸಾಧ್ಯವೆಂಬುದನ್ನು ವಿವೇಕಾನಂದರ ಜೀನದಿಂದ ಅರಿಯಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಜೆ.ಗೋಪಿನಾಥ್, ಉಪನ್ಯಾಸಕರಾದ ಎನ್.ವಾಸು, ಪಿ.ಎಸ್.ಮಂಜುಳ, ಸಾದಿಯಾ, ಕೆ.ಎನ್.ಮಂಜುನಾಥರೆಡ್ಡಿ, ಎನ್.ಗೋಪಾಲನ್, ಎನ್.ಶಂಕರೇಗೌಡ , ಬಿ.ಎನ್.ವೀಣಾ, ಜಿ.ಕೆ.ನಾರಾಯಣಸ್ವಾಮಿ, ರಘುಪತಿ, ವೇಣುಗೋಪಾಲ್ ಇದ್ದರು.