ಶ್ರೀನಿವಾಸಪುರ 1 : ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಗುರುವಾರ ವಿವಿಧ ಕನ್ನಡ ಪರ ಸಂಘನೆಗಳಿಂದ 60% ಕನ್ನಡ ಭಾಷೆ ನಾಮಫಲಕಗಳ ಕಡ್ಡಾಯವಾಗಿ ಜಾರಿಗೊಳಿಸುವಂತೆ ಆದೇಶಿಸಲು ತಹಶೀಲ್ದಾರ್ ಜಿ.ಎಸ್.ಸುದೀಂದ್ರ ರವರಿಗೆ ಮನವಿ ಪತ್ರ ನೀಡಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಸ್. ಜಗದೀಶ್ ಮಾತನಾಡಿ ರಾಜ್ಯ ಗಡಿ ತಾಲೂಕು ಆದ ಶ್ರೀನಿವಾಸಪುರ ತಾಲೂಕೆಗೆ ಸಂಬಂದಿಸಿದಂತೆ ಹಲವಾರು ಖಾಸಗಿ ಸಂಸ್ಥೆಗಳು ಹಾಗು ವಾಣಿಜ್ಯ ಮಳಿಗೆಗಳು ಇದ್ದು ಅವುಗಳ ಮೇಲೆ ಕನ್ನಡ ಭಾಷೆ ಬಿಟ್ಟು ಇತರೆ ಭಾಷೆಗಳಲ್ಲಿ ನಾಮಫಲಕಗಳು ಇದ್ದು, ಸರ್ಕಾರದ ಆದೇಶದಂತೆ ಮಾತೃ ಭಾಷೆ ಕನ್ನಡ 60% ಕಡ್ಡಾಯವಾಗಿ ಬಳಸುವಂತೆ ಆದೇಶ ಮಾಡಿದರು, ಸಹ ಇದುವರೆಗೂ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ನವ ಕರ್ನಾಟಕ ಸ್ವಾಭಿಮಾನ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದಿಕ್ಅಹಮ್ಮದ್ ಮಾತನಾಡಿ ತಹಶೀಲ್ದಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಪುರಸೆಭೆ ಮುಖ್ಯಾಧಿಕಾರಿ ಕನ್ನಡ ಭಾಷೆ ನಾಮಫಲಕಗಳ 60% ಕಡ್ಡಾಯವಾಗಿ ಜಾರಿಗೊಳಿಸುವಂತೆ ಖಾಸಗಿ ಸಂಸ್ಥೆಗಳಿಗೆ ಹಾಗು ವಾಣಿಜ್ಯ ಮಳಿಗೆಗಳಿಗೆ ಆದೇಶ ನೀಡಬೇಕು. ಇಲ್ಲದ ಪಕ್ಷದಲ್ಲಿ ಕನ್ನಡ ಪರ ಸಂಘನೆಗಳು ಸೇರಿ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಇದಕ್ಕೆ ಅಧಿಕಾರಿಗಳೇ ಆಗುವ ಅನಾಹುತಗಳಿಗೆ ನೇರೆ ಹೊಣೆಗಾರರು ಎಂದು ಎಚ್ಚರಿಸಿದರು.
ಇದೇ ಸಮಯದಲ್ಲಿ ಪುರಸಭೆ ಕಛೇರಿ ಮುಂಭಾಗದಲ್ಲಿ ಪುರಸಭೆ ಮುಖ್ಯಾಧಿಕಾರಿರವರಿಗೂ 60% ಕನ್ನಡ ಭಾಷೆ ನಾಮಫಲಕಗಳನ್ನು ಕಡ್ಡಾಯಗೊಳಿಸುವಂತೆ ಮನವಿ ಪತ್ರ ನೀಡಿದರು.
ಕಸ್ತೂರಿ ಕನ್ನಡ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ವಿ.ಸುಬ್ರಮಣಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿ.ಸುಗ್ರೀವ, ಸಿ.ನಾಗರಾರ್ಜುನರೆಡ್ಡಿ, ವಿ.ಅನಂದ, ಜಿ.ಶ್ರೀನಿವಾಸಪ್ಪ, ಕೃಷ್ಣಪ್ಪ, ವೆಂಕಟೇಶ್, ರಾಜೇಶ್, ಕೆ.ನಾಗರಾಜ್, ವಿ.ಶ್ರೀನಿವಾರೆಡ್ಡಿ, ಎಚ್.ಎಂ.ಅರುಣ್ಕುಮಾರ್, ವಿ.ರಾಮಾಂಜಿ ಇದ್ದರು.