ಶ್ರೀನಿವಾಸಪುರ : ಪಟ್ಟಣದ ಪುರಸಭೆ ಮೀಸಲಾತಿ ಸೋಮವಾರ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗು ಉಪಾಧ್ಯಕ್ಷ ಎಸ್ಸಿ ಮಹಿಳಗೆ ಒಲಿದಿದೆ.
ಮೀಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸ್ಥಳೀಯ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ. ಸಾರ್ವಜನಿಕ ಲೆಕ್ಕಚಾರಗಳ ಕುರಿತಾಗಿ ಚರ್ಚೆಗಳೂ ಆರಂಭವಾಗಿದೆ. ಕಳೆದ ಹದಿನೈದು ತಿಂಗಳಿನಿಂದ ರಾಜಕೀಯ ಚಟುವಟಿಕೆ ಇಲ್ಲದೆ ಪುರಸಭೆಯಲ್ಲಿ ಅಧಿಕಾರಿಗಳಿದೆ ಕಾರ್ಯಕಲಾಪ ಸಾಗಿತ್ತು. ಈಗ ಮೀಸಲಾತಿ ಪ್ರಕಟವಾಗಿರುವುದು ಸ್ಥಳೀಯ ಪುರಸಭೆ ಸದಸ್ಯರಲ್ಲಿ ರಾಜಕೀಯ ಗರಿಗೆದರಿದೆ.
ಒಟ್ಟು 23 ಸದಸ್ಯ ಶ್ರೀನಿವಾಸಪುರ ಪುರಸಭೆಯಲ್ಲಿ ಜೆಡಿಎಸ್ 11 ಹಾಗು ಕಾಂಗ್ರೆಸ್ 12 ಸದಸ್ಯರನ್ನು ಹೊಂದಿದೆ. ರಾಜಕೀಯ ಲೆಕ್ಕಾಚಾರದಂತೆ ಎರಡು ಪಕ್ಷಗಳಿಗೆ ಅಧ್ಯಕ್ಷ ಸ್ಥಾನದ ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿದೆ.