ಶ್ರೀನಿವಾಸಪುರ : ತಹಶೀಲ್ದಾರ್ ಕಚೇರಿ ಅವರಣದಲ್ಲಿ ಇರುವ ಗ್ರಂಥಾಲಯಕ್ಕೆ ಹೋಗುವ ಸ್ಥಳದಲ್ಲಿ ಮಳೆ ನೀರು ನಿಂತು ಗ್ರಂಥಾಲಯಕ್ಕೆ ಹೋಗಿ ಬರುವ ಓದುಗರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ಕಟ್ಟಡಲ್ಲಿಯೇ ಹಲವು ವರ್ಷಗಳಿಂದ ಗ್ರಂಥಾಲಯ ನಡೆಸುತ್ತಿದ್ದು ಇತ್ತೀಚಿಗೆ ತಾಲ್ಲೂಕು ಕಚೇರಿ ಆವರಣವನ್ನು ನವೀಕರಣ ಮಾಡಿದ ಸಂದರ್ಭದಲ್ಲಿ ಆವರಣದಲ್ಲಿಯೂ ಸಹಾ ಕಾಂಕ್ರೀಟ್ ಹಾಕಲಾಗಿದ್ದು ಮಳೆ ಬಿದ್ದ ಸಂದರ್ಭದಲ್ಲಿ ಗ್ರಂಥಾಲಯದ ಮುಂಭಾಗ ತಗ್ಗುಪ್ರದೇಶವಾಗಿದ್ದು ಮಳೆ ನೀರು ಶೇಖರಣೆಯಾಗಿ ಸಾರ್ವಜನಿಕರು ಗ್ರಂಥಾಲಯಕ್ಕೆ ಬರಲು ಸಹ ಪರದಾಡುತ್ತಿದ್ದು ಹಲವು ಭಾರಿ ಅಧಿಕಾರಿಗಳಿಗೆ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಲು ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲವೆಂದು ಗ್ರಂಥಾಲಯ ಮೇಲ್ವಿಚಾರಕಿ ಹೇಮಾವತಿ ಆರೋಪಿದ್ದಾರೆ.