ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಮನೋಲ್ಲಾಸ ಉಂಟುಮಾಡುತ್ತವೆ. ಸದಾ ದುಡಿಯುವ ಪೌರ ಕಾರ್ಮಿಕರು ಆಟೋಟಗಳಲ್ಲಿ ಭಾಗವಹಿಸಬೇಕು. ಕೆಲಸದ ದಣಿವು ಮರೆತು ಆಟ ಆಡಬೇಕು ಎಂದು ಹೇಳಿದರು.
ಉಪಾದ್ಯಕ್ಷೆ ಅಯೀಷಾ ನಾಯಜ್ ಮಾತನಾಡಿ, ನಿಮ್ಮ ವೈಯಕ್ತಿಕ ಆರೋಗ್ಯದ ಕಡೆವು ಹೆಚ್ಚಿನ ಕಾಳಜಿ ವಹಿಸಿ ಕಾರ್ಯನಿರ್ವಹಣಾ ವೇಳೆಯಲ್ಲಿ ಆರೋಗ್ಯದ ದೃಷ್ಠಿಯಿಂದ ತಮಗೆ ನೀಡಿರುವ ಸಾಧನ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಬೇಕೆಂದರು.
ಮುಖ್ಯಾಧಿಕಾರಿ ಎಂ.ಜಯರಾಂ ಮಾತನಾಡಿ, ದೈಹಿಕ ಹಾಗೂ ಮಾನಸಿಕ ದೃಢತೆ ಕ್ರೀಡೆಗಳಿಂದ ಬರುತ್ತದೆ. ದೃಢ ಕಾಯ ಹಾಗೂ ದೃಢ ಮನಸ್ಸು ಉತ್ತಮ ವ್ಯಕ್ತಿತ್ವದ ಲಕ್ಷಣ. ಪೌರ ಕಾರ್ಮಿಕರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ತಮ್ಮ ಮಕ್ಕಳಲ್ಲೂ ಕ್ರೀಡಾಸಕ್ತಿ ಬೆಳೆಸಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಕಂದಾಯ ನಿರೀಕ್ಷಕರಾದ ವಿ.ನಾಗರಾಜ್, ಶಂಕರ್, ಎಂಜಿನಿಯರ್‍ಗಳಾದ ರೂಪ, ವೇದಾಂತ್ ಶಾಸ್ತ್ರಿ, ಅಧಿಕಾರಿಗಳಾದ ಸುರೇಶ್, ಪ್ರತಾಪ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಷಬ್ಬೀರ್, ರಸೂಲ್ ಖಾನ್, ರಾಮಾಂಜಿ, ರೆಡ್ಡಪ್ಪ, ಜರೀನಾ ಬೇಗಂ, ವಹೀದಾ ಬೇಗಂ, ಇರ್ಷಾದ್ ಇದ್ದರು.