ಶ್ರೀನಿವಾಸಪುರ : ಕಳೆದ 40 ದಿನಗಳ ಹಿಂದೆ ಲೋಕಸಭಾ ಚುನವಾಣೆಯ ಮತದಾನ ನಡೆದಿದ್ದು, ಮಂಗಳವಾರ ನಡೆದ ಮತ ಎಣಿಕೆಯ ವೀಕ್ಷಣೆ ಗಾಗಿ ನಾಗರೀಕರು ತಮ್ಮ ತಮ್ಮ ಮನೆಗಳಲ್ಲಿನ ಟಿವಿ ಪರದೆಯ ಮುಂದೆ ಕುಳಿತು ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟ ಆಡಳಿತ ನಡೆಸುತ್ತದಯೇ ಅಥವಾ ಇಂಡಿ ಮೈತ್ರಿಕೂಟ ಆಡಳಿತ ನಡೆಸುತ್ತದಯೇ ಎಂಬುದನ್ನ ಕುಟುಂಬದ ಸದಸ್ಯರೊಂದಿಗೆ ಚರ್ಚೆ ಮಾಡಿಕೊಳ್ಳುತ್ತಿದ್ದು ಕೇಳಿಬಂತು.
ಲೋಕಸಭಾ ಚುನವಾಣೆ ಹಾಗು ನೆರೆಯ ಆಂದ್ರದ ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು ವೀಕ್ಷಿಸಿಸುವ ಸಲುವಾಗಿ ಸಾರ್ವಜನಿಕರು ಟಿವಿ ಮುಂದೆ ಇನ್ನು ಕೆಲವರು ಮೊಬೈಲ್ಗಳಲ್ಲಿ ವೀಕ್ಷಿಸಲು ಕುಳಿತಿದ್ದ ಸಲುವಾಗಿ ಪ್ರತಿ ದಿನ ವಾಹನಗಳ ಓಡಾಟ, ಜನಸಂದನಿಗಳಿಂದ ಕೂಡಿದ್ದ ಪಟ್ಟಣದ ಎಂಜಿ ರಸ್ತೆಯು ಹಾಗು ತಹಶೀಲ್ದಾರ್ ಕಚೇರಿ ಆವರಣವು ಸಾರ್ವಜನಿಕರ ಓಡಾಟವಿಲ್ಲದೆ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿತ್ತು.
ಪಟ್ಟಣದಲ್ಲಿ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿನ ಕೆಲ ಸಾರ್ವಜನಿಕರು ಟೀ ಅಂಗಡಿಗಳ ಮುಂದೆ ಜೆಡಿಎಸ್ ಅಭ್ಯರ್ಥಿ ಗೆಲುವಿನ ಬಗ್ಗೆ ತಮ್ಮ ತಮ್ಮ ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್ನು ಕೆಲವರು ಆಂದ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಹಾಗು ಜನಗನ್ಮೋಹನ್ರೆಡ್ಡಿರವರ ಬಗ್ಗೆ ಚರ್ಚೆ ಮಾತನಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಲೋಕಸಭಾ ಚುನಾವಾಣೆಯು ಅಷ್ಟು ಪ್ರಾಮುಖ್ಯತೆಯು ಕೊಡದಿದ್ದರು ಸಹ ಈ ಭಾರಿ ಬಿಜೆಪಿ-ಜೆಡಿಎಸ್ ಪಕ್ಷವು ಮೈತ್ರಿ ಅಭ್ಯರ್ಥಿಯಾದ್ದರಿಂದ ಎರಡು ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದರು.