ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಛೇರಿ ಸಬಾಂಗಣದಲ್ಲಿ ಗುರುವಾರ ವಿವಿಧ ಬಾಬ್ತುಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಮಾತನಾಡಿ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ 2024-25 ಸಾಲಿಗೆ ಒಂದು ವರ್ಷದ ಅವಧಿಗೆ ವಾರದ ಸಂತೆ, ದಿನದ ಮಾರುಕಟ್ಟೆ , ಕಸಾಯಿಖಾನೆ, ಹಾಗೂ ಬಸ್ ನಿಲ್ದಾಣದ ಸುಂಕ ವಸೂಲಿ, ಪುರಸಭಾ ವಾಣಿಜ್ಯ ಮಾರುಕಟ್ಟೆಯಲ್ಲಿ ಇರುವ ಶೌಚಾಲಯದ ಶುಲ್ಕ, ಮುಸಾಫೀರ್ ಖಾನ್ ವಾಣಿಜ್ಯ ಸಂಕೀರ್ಣದ ನೆಲಮಹಡಿಯ ವಾಹನ ನಿಲುಗಡೆಯ ಶುಲ್ಕ ಸೇರಿ ನಾನಾ ವಾರ್ಷಿಕ ಹರಾಜು ಪ್ರಕ್ರಿಯೆಗಳು ನಡೆದವು ಎಂದು ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ ಹರಾಜು ಬಾಬ್ತು ಒಟ್ಟು 17.65 ಲಕ್ಷ ಆದಾಯ ಬಂದಿದೆ. ಈ ಸಾಲಿನಲ್ಲಿ 21.69 ಲಕ್ಷ ಹರಾಜು ಮೂಲಕ ಆದಾಯ ಬಂದಿದೆ. ಕಳೆದ ಸಾಲಿಗೂ ಈ ಸಾಲಿಗೂ ಒಟ್ಟು 4.88 ಲಕ್ಷ ಅಧಿಕ ಲಾಭ ಬಂದಿರುತ್ತದೆ.
ಹರಾಜಿನಲ್ಲಿ 36 ಒಟ್ಟು ಬೀಟ್ ದಾರರು ಠೇವಣಿಯನ್ನು ಕಟ್ಟಿದ್ದರು. ಅದರಲ್ಲಿ ಒಟ್ಟು 06 ಬೀಟ್ದಾರರು ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಬಾಬ್ತುಗಳಿಗೆ 12 ತಿಂಗಳಿಗೆ ಮಾತ್ರ ಗುತ್ತಿಗೆ ಪಡೆದಿದ್ದು, ಸಾರ್ವಜನಿಕರು ಗುತ್ತಿಗೆದಾರರಿಗೆ ನಿಗದಿತ ಶುಲ್ಕವನ್ನು ಕೊಟ್ಟು ಸಹಕರಿಸುವಂತೆ ಮನವಿ ಮಾಡಿದರು.
ಪುರಸಭಾ ಆಡಳಿತ ಅಧಿಕಾರಿ ಹಾಗು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿದರು. ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಕಂದಾಯ ಅಧಿಕಾರಿ ವಿ.ನಾಗರಾಜು, ಕಂದಾಯ ನಿರೀಕ್ಷಕ ಎನ್.ಶಂಕರ್, ವ್ಯವಸ್ಥಾಪಕ ನವೀನ್ಚಂದ್ರ, ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್, ಪರಿಸರ ಇಂಜಿನೀಯರ್ ಲಕ್ಷ್ಮೀಶ್, ಇಂಜಿನೀಯರ್ ಶ್ರೀನಿವಾಸ್, ಎಎಸ್ಐ ಎಂ.ಡಿ.ನಾರಾಯಣಪ್ಪ, ಪುರಸಭೆ ಸದಸ್ಯರಾದ ಬಿ.ವಿ.ರೆಡ್ಡಿ, ಅಪ್ಪೂರುರಾಜು, ಅನೀಸ್ಅಹಮ್ಮದ್ , ಆನಂದ್, ಪುರಸಭಾ ಸಿಬ್ಬಂದಿ ಪ್ರತಾಪ್, ಮಂಜುನಾಥ್, ಸುರೇಶ್, ಸಂತೋಷ ಇದ್ದರು.