ಶ್ರೀನಿವಾಸಪುರ : ರಾಜ್ಯದಲ್ಲಿನ ಮೊದಲ ಹಂತದ 2024 ರ ಲೋಕಸಭಾ ಚುನಾವಣೆಗೆ ಕರ್ತವ್ಯಕ್ಕೆ ಹಾಜರಾಗಲು ತಾಲೂಕಿನ ಹಾಗು ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ ಸಿಬ್ಬಂದಿಯವರು ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳ್ಳಂಬೆಳ್ಳಗೆ ಸೇರಿದ್ದರು.
ಇದೇ ಸಮಯದಲ್ಲಿ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಪತ್ರಿಕೆಯೊಂದಿಗೆ ಮಾತನಾಡಿ ವಿಧಾನಸಭಾ ಕ್ಷೇತ್ರಾದ್ಯಂತ ಒಟ್ಟು 284 ಮತಗಟ್ಟೆಗಳು ಇದ್ದು, ಅವುಗಳಲ್ಲಿ ಸೂಕ್ಷ್ಮ 77, ಅತಿಸೂಕ್ಷ್ಮ 09, ಉಳಿದವು ಸಾಮಾನ್ಯ ಮತಗಟ್ಟೆಗಳು ಆಗಿರುತ್ತವೆ ಎಂದು ಮಾಹಿತಿ ನೀಡಿದರು.
ಒಟ್ಟು ಮತದಾರರು 2ಲಕ್ಷ 20 ಸಾವಿರ, ಪುರಷರು 1ಲಕ್ಷ 8 ಸಾವಿರ, ಮಹಿಳೆಯರು 1ಲಕ್ಷ 11 ಸಾವಿರ ತೃತೀಯ ಲಿಂಗದವರು 09 ಜನ ಚುನಾವಣೆಯ ಕರ್ತವ್ಯವನ್ನು ನಿರ್ವಹಿಸುತ್ತಿರುವವರ ಸಿಬ್ಬಂದಿಗಳ ಸಂಖ್ಯೆ 1350 , ಪೊಲೀಸ್ ಸಿಬ್ಬಂದಿ 500 , ಮೈಕ್ರೋ ವೀಕ್ಷಕರು 350 , ಕಂದಾಯ ಇಲಾಖೆ ಸಿಬ್ಬಂದಿ 200, ಸೆಕ್ಟ್ರ್ ಅಧಿಕಾರಿಗಳು 28, 169 ಮತಗಟ್ಟೆಗಳಿಗೆ ಸಿಸಿ ಕ್ಯಾಮರ ಅಳವಡಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಚೇತನರಿಗೆ ವೀಲ್ಛೇರ್ ಅಳವಡಿಸಲಾಗಿದೆ ಹಾಗೂ 45 ಬಸ್ಗಳನ್ನ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.