

ಶ್ರೀನಿವಾಸಪುರ: ಪಟ್ಟಣದ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ 11 ಅಂಗಡಿ ಮಳಿಗೆಗಳನ್ನು ಗುರುವಾರ ಬಹಿರಂಗ ಹರಾಜಿನ ಮೂಲಕ ರೂ.46.63 ಲಕ್ಷಕ್ಕೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹರಾಜಿನ ಬಳಿಕ ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಖಾಲಿಯಿದ್ದ 11 ಅಂಗಡಿಗಳ ಬಹಿರಂಗ ಹರಾಜು ನಡೆಸಲಾಗಿದೆ. ಹರಾಜಿನಲ್ಲಿ ಅಂಗಡಿ ಪಡೆದುಕೊಂಡಿರುವ ವ್ಯಕ್ತಿಗಳು, ಅಂಗಡಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಹೇಳಿದರು.
ಅಂಗಡಿ ಮಳಿಗೆ ಬಾಡಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. ಪುರರಸಭೆ ಗಮನಕ್ಕೆ ತರದೆ ಅಂಗಡಿ ಮಳಿಗೆಗಳನ್ನು ಬೇರೆಯರಿಗೆ ವರ್ಗಾಯಿಸಬಾರದು. ಪುರಸಭೆ ನಿಯಮಗಳಿಗೆ ಒಳಪಟ್ಟು ವ್ಯವಹರಿಸಬೇಕು. ಮಳಿಗೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಸಂಜಯ್ಸಿಂಗ್, ಎನ್ಎಂಆರ್ ನಾಗರಾಜ್, ಜಯಣ್ಣ, ರಾಮಾಂಜಿ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್