

ಶ್ರೀನಿವಾಸಪುರ : ಪಟ್ಟಣದ ಶಂಕರಮಠದಲ್ಲಿ ಶುಕ್ರವಾರ ರಾತ್ರಿ ಶಂಕರ ಜಯಂತಿ ಅಂಗವಾಗಿ ಸೌಂದರ್ಯ ಲಹರಿ, ಉಪನ್ಯಾಸಗಳು, ಹಾಗೂ ಮಂಟಪೋತ್ಸವವು ಭಜನೆ , ಕೋಲಾಟ ಹಾಗೂ ಮಂತ್ರ ಪಠಣಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶಂಕರಮಠದ ವ್ಯವಸ್ಥಾಪಕ ಶ್ರೀನಿವಾಸ್ ತಾಲೂಕು ಸತ್ಸಂಗದ ಅಧ್ಯಕ್ಷ ಸತ್ಯಮೂರ್ತಿ, ಸದಸ್ಯೆ ಮಂಗಳಸತ್ಯಮೂರ್ತಿ , ಶಂಕರ ಮಠದ ಸದಸ್ಯರಾದ ಮಂಜುನಾಥ್ , ಶ್ರೀನಿವಾಸಮೂರ್ತಿ, ದೇವಸ್ಥಾನದ ಅರ್ಚಕ ಸುಬ್ರಮಣ್ಯಸ್ವಾಮಿ, ನಾಗೇಂದ್ರ ಇದ್ದರು.