ಶ್ರೀನಿವಾಸಪುರ : ತಾಲೂಕಿನಲ್ಲಿ ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಸುಸೂತ್ರವಾಗಿ ನಡೆಸಲು ಕೊಠಡಿ ಮೇಲ್ವಿಚಾರಕರು ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸದೇ, ಪರೀಕ್ಷಾ ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು. ವಸ್ತುನಿಷ್ಟವಾಗಿ ಮಕ್ಕಳು ಪರೀಕ್ಷೆ ಎದುರಿಸಲು ಎಲ್ಲಾ ಪರೀಕ್ಷಾ ಸಿಬ್ಬಂದಿಯೂ ಮುಂದಾಗಬೇಕು ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಎಂದು ಸೂಚಿಸಿಲಾಗಿದೆ.
ಪಟ್ಟಣದ ಬಿಆರ್ಸಿ ಕಛೇರಿಯಲ್ಲಿ ಗುರುವಾರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾಥಿಗಳಿಗೆ ಡೆಸ್ಕ್ , ಅಗತ್ಯವಿರುವ ಕುಡಿಯುವ ನೀರು , ವಿದ್ಯುತ್ , ಆರೋಗ್ಯ ಸಮಸ್ಯೆಗೆ ಸಂಬಂದಿಸಿದಂತೆ , ಸಾರಿಗೆ ಸೇರಿ ಇನ್ನಿತರ ಸೌಕರ್ಯಗಳನ್ನು ಒದಗಿಸಲು ವಿವಿಧ ಇಲಾಖಾಧಿಕಾರಿಗಳ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಶ್ರೀನಿವಾಸಪುರ ತಾಲೂಕು ಕಳೆದ 10 ರಿಂದ 12 ವರ್ಷಗಳಿಂದಲೂ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ , ವಿದ್ಯಾರ್ಥಿಗಳ ಪೋಷಕರ ಸಹಕಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ , ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುತ್ತಾ ಬಂದಿದೆ, ಮುಂದಿನ ದಿನಗಳಲ್ಲಿಯೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ 78 ಪ್ರೌಡಶಾಲೆಗಳಿಂದ ಈ ಬಾರಿ ಒಟ್ಟು 2580 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದು, ಸರ್ಕಾರಿ 25 ಶಾಲೆ , ಅನುದಾನಿತ 7, ಖಾಸಗಿ 46 ತಾಲೂಕಿನಾದ್ಯಾಂತ ಒಟ್ಟು 10 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ತಾಲೂಕಿನತಾಲೂಕಿನ ಪಟ್ಟಣದಲ್ಲಿ 3 , ಗ್ರಾಮೀಣ ಭಾಗದಲ್ಲಿ 7 ಪರೀಕ್ಷೆ ಕೇಂದ್ರಗಳನ್ನು ತರೆಯಲಾಗಿದೆ ಎಂದರು.
ಬಿಆರ್ಸಿ ಕೆ.ಸಿ.ವಸಂತ ಇದ್ದರು.