ಶ್ರೀನಿವಾಸಪುರ, ಜೂ.9: ಮುಂಗಾರು ಮಳೆ ಆರ್ಭಟಕ್ಕೆ ನಾಪತ್ತೆ ಆಗಿರುವ ಪುರಸಭೆ ಅಧಿಕಾರಿಗಳನ್ನು ಹುಡುಕಿಕೊಟ್ಟು ಒತ್ತುವರಿ ಆಗಿರುವ ರಾಜಕಾಲುವೆ ಚರಂಡಿ ತೆರೆವುಗೊಳಿಸಿ ಜನಸಾಮಾನ್ಯರ ಬದುಕು ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಜೂ.13 ರ ಗುರುವಾರ ಕಸದ ಸಮೇತ ಪುರಸಬೆ ಮುತ್ತಿಗೆ ಹಾಕಲು ತಾಲ್ಲೂಕು ಕಚೇರಿ ಅವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಪ್ರತಿ ವರ್ಷ ಮುಂಗಾರು ಮಳೆ ಆರ್ಭಟಕ್ಕೆ ನಗರಾದ್ಯಂತ ಜನ ಸಾಮಾನ್ಯರ ಬದುಕು ಆರೋಗ್ಯ ಹದಗೆಟ್ಟಾಗ ತಾಲ್ಲೂಕಾಡಳಿತ ಹಾಗೂ ಪುರಸಭೆ ಅಧಿಕಾರಿಗಳಿಗೆ ಅವ್ಯವಸ್ಥೆಯ ಸಮಸ್ಯೆ ನೆನಪಿಗೆ ಬರುತ್ತದೆ. ನೆಪಮಾತ್ರಕ್ಕೆ ಸಮಸ್ಯೆಯಿರುವ ಜಾಗಗಳಿಗೆ ಬೇಟಿ ನೀಡಿ ಆನಂತರ ನಾಪತ್ತೆ ಆದರೆ ಮತ್ತೆ ಮುಂದಿನ ವರ್ಷ ಅಧಿಕಾರಿಗಳ ಮುಖ ಜನಸಾಮಾನ್ಯರಿಗೆ ತೋರಿಸುತ್ತಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಸರಿಪಡಿಸದ ಜನಪ್ರತಿನಿದಿಗಳು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬಲಾಡ್ಯರು ರಾಜಕೀಯ ಬೆಂಬಲಿಗರು ರಾಜಕಾಲುವೆ ಹಾಗೂ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು ನಿವೇಶನಗಳು ನಿರ್ಮಿಸಿಕೊಂಡು ಮಳೆ ನೀರು ಸರಾಗವಾಗಿ ಕಾಲುವೆಗಳ ಮುಖಾಂತರ ಕೆರೆಗಳಿಗೆ ಹರಿಯದೆ ಸುರಿಯುತ್ತಿರುವ ಮಳೆ ನೀರು ಬಡವರ ಮನೆಗಳಿಗೆ ಮತ್ತು ರೈತರ ತೋಟಗಳಿಗೆ ನುಗ್ಗಿ ಅವಾಂತರಗಳನ್ನು ಸೃಷ್ಠಿಸುತ್ತಿದ್ದರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಭಯವೇಕೆ ಎಂದು ಪ್ರಶ್ನೆ ಮಾಡಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ನಗರಾದ್ಯಂತ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಕಸವನ್ನು ತೆರೆವುಗೊಳಿಸದೆ ಬೇಜವಬ್ದಾರಿ ವರ್ತನೆಯಿಂದ ಸುರಿಯುತ್ತಿರುವ ಮಳೆ ನೀರಿನಲ್ಲಿ ಕಸಕಡ್ಡಿ ಬಡವರ ಮನೆಗಳಿಗೆ ಹರಿದು ಇತ್ತ ಬದುಕು ಇಲ್ಲದೆ ಅತ್ತ ಆರೋಗ್ಯವೂ ಇಲ್ಲದೆ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬಡವರ ಬದುಕು ಕತ್ತಲೆಯಲ್ಲಿ ಕಳೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಟ್ಯಾಂತರ ರೂಪಾಯಿ ಅನುದಾನ ಪುರಸಭೆಗೆ ಬಿಡುಗಡೆ ಆಗುತ್ತಿದ್ದು, ಹದಗೆಟ್ಟಿರುವ ಚರಂಡಿಗಳನ್ನು ಸ್ವಚ್ಚತೆ ಮಾಡಿ ಒತ್ತುವರಿ ಆಗಿರುವ ರಾಜಕಾಲುವೆಗಳನ್ನು ತೆರೆವುಗೊಳಿಸಿ ಅಭಿವೃದ್ದಿ ಮಾಡಬೇಕಾದ ಅಧಿಕಾರಿಗಳೇ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿ ಕನಿಷ್ಠ ನಗರದ ವಾರ್ಡ್ಗಳಲ್ಲಿ ಸ್ವಚ್ಚತೆ ಮರೆಯಾಗಿ ಕಸವೂ ರಾಶಿಯಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಪ್ರತಿ ದಿನ, ಪ್ರತಿ ಕ್ಷಣ ಬಡವನ ಬದುಕು ಸಾವಿಗೆ ಸಮೀಪಿಸುತ್ತಿರುವಂತೆ ಬದುಕು ನಡೆಸುತ್ತಿದ್ದರೂ ಜನಪ್ರತಿನಿದಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಿಡಿ ಕಾರಿದರು.
24 ಘಂಟೆಯಲ್ಲಿ ನಗರಾದ್ಯಂತ ಒತ್ತುವರಿ ಆಗಿರುವ ರಾಜಕಾಲುವೆ ಚರಂಡಿಗಳನ್ನು ತೆರೆವುಗೊಳಿಸಿ ಮುಂಗಾರು ಮಳೆಯಿಂದ ಬಡವರ ಬದುಕು ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಜೂ.13 ರ ಗುರುವಾರ ಕಸದ ಸಮೇತ ಪುರಸಭೆ ಮುತ್ತಿಗೆ ಹಾಕುವ ನಿರ್ದಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದರು.
ಸಭೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವ, ಶೇಕ್ಶಪಿವುಲ್ಲಾ, ಡ್ಯಾವಂಡಹಳ್ಳಿ ರಾಜೇಂದ್ರಗೌಡ, ಸಹದೇವಣ್ಣ, ಸುಪ್ರೀಂ ಚಲ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ನವೀನ್ ಮುಂತಾದವರಿದ್ದರು.