

ಶ್ರೀನಿವಾಸಪುರ : ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಸರ್ಕಾರಿ ಬಾಲಕೀಯರ ಶಾಲೆಯ ವಿದ್ಯಾರ್ಥಿ ಕೆ ಎಂ ಮೇದಾ 625 ಅಂಕಗಳಿಗೆ 621 ಅಂಕ ಪಡೆದಿರುವ ವಿದ್ಯಾರ್ಥಿ ಮನೆಗೆ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಿ ಶುಭ ಆರೈಸಿದರು.
ಶ್ರೀನಿವಾಸಪುರ ಪಟ್ಟಣಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದು ಕಾಂಗ್ರೇಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ರವರ ಪರವಾಗಿ ಶ್ರೀನಿವಾಸ್ ರವರ ಧರ್ಮಪತ್ನಿ ಹಾಗೂ ಹಿರಿಯೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರು ಮೇ 10 ರ ಶುಕ್ರವಾರ ಪಟ್ಟಣದ ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ತಾಲ್ಲೂಕಿನ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಶಿಕ್ಷಕರ ಜೊತೆ ಸಭೆಯನ್ನು ನಡೆಸಿ ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಪೂರ್ಣಿಮಾ ಶ್ರೀನಿವಾಸ್ ರವರು ಮಾತನಾಡಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆರು ತಿಂಗಳ ಹಿಂದೆಯೇ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಡಿ ಟಿ ಶ್ರೀನಿವಾಸ್ ರವರನ್ನು ಘೋಷಣೆ ಮಾಡಿದ್ದು 5 ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ ಶಿಕ್ಷಕರು ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಅದೇ ರೀತಿ ಕೊಠಡಿಗಳ ಸಮಸ್ಯೆಗಳ ಬಗ್ಗೆಯೂ ಮಾಹಿತಿ ನೀಡಿದ್ದು 7ನೇ ವೇತನದ ಬಗ್ಗೆ ಹಾಗೂ ಎನ್ ಪಿ ಎಸ್ ರದ್ದು ಮಾಡಿ ಒ ಪಿ ಎಸ್ ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದು ಎಲ್ಲಾ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವ ಕಾರಣ ಶಿಕ್ಷಕರ ಸಮಸ್ಯೆಗಳು ಬಗೆ ಹರಿಸುತ್ತೇವೆಂದರು ಈ ಸಂದರ್ಭದಲ್ಲಿ ಯಾದವ ಸಮುದಾಯದ ಮುಖಂಡರಾದ ಕೃಷ್ಣಪ್ಪ, ವಕೀಲ ರಾದಕೃಷ್ಣ, ಎಂ ಎಫ್ ಕೃಷ್ಣಪ್ಪ, ವಕೀಲರಾದ ಕೃಷ್ಣ, ವಕೀಲರಾದ ರಘುನಾಥರೆಡ್ಡಿ, ಅಪ್ಪುರ್ ಬಾಲಾಜಿ, ದಿಂಬಾಲ್ ಅಶೋಕ್, ಸಂಜಯ್ ರೆಡ್ಡಿ,ಶ್ರೀರಾಮರೆಡ್ಡಿ,ತೂಪಲ್ಲಿ ಕೃಷ್ಣಾರೆಡ್ಡಿ,ಸೀತಾರಾಮರೆಡ್ಡಿ, ನಾರಾಯಣಸ್ವಾಮಿ ಇತರರು ಹಾಜರಿದ್ದರು.
