ಶ್ರೀನಿವಾಸಪುರ: ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್ನಲ್ಲಿದ್ದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಮಾನಸಿಕ ಅಸ್ವಸ್ಥನಿಂದ ಧ್ವಂಸ ಮಾಡಿರುವ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ ಮಾನಸಿಕ ಅಸ್ವಸ್ಥ ಯರ್ರಂವಾರಪಲ್ಲಿ ಮೂಲದ ತಿರುಮಳಪ್ಪ (65 ವರ್ಷ) ಅಲಿಯಾಸ್ ಗಾಂದಿ ಎಂಬ ವ್ಯಕ್ತಿಯು ದ್ವಸಂ ಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕಂಬಕ್ಕೆ ಕಟ್ಟಿ ಹಾಕಿದ್ದು, ವಿಷಯ ತಿಳಿದ ತಕ್ಷಣ ಶ್ರೀನಿವಾಸಪುರ ಪಟ್ಟಣದ ಪೊಲೀಸರ ನಿರೀಕ್ಷಕ ಎಂ.ಬಿ.ಗೂರವಕೊಳ್ಳ ತಂಡ ಸ್ಥಳಕ್ಕೆ ಬೇಟಿ ನೀಡಿ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು , ಸ್ಥಳೀಯರನ್ನ ಸಮದಾನ ಪಡಿಸಿದರು.
ಪೊಲೀಸರು ದೂರು ದಾಖಲಿಸಿಕೊಂಡು ನಂತರ ಮಾನಸಿಕ ಅಸ್ವಸ್ಥನನ್ನ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ನಂತರ ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆಕೊಡಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸಮುದಾಯದ ಯುವ ಮುಖಂಡರು ನ್ಯಾಯಕ್ಕಾಗಿ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿ, ಕೆಲ ಸಮಯ ಸ್ಥಳದಲ್ಲಿ ಪೊಲೀಸರಿಗೂ ಹಾಗೂ ಸಮುದಾಯದ ಯುವ ಮುಖಂಡರ ಮಧ್ಯೆ ವಾಕ್ಸಮರ ನಡೆಯಿತು. ಘಟನೆಯ ಬಗ್ಗೆ ನ್ಯಾಯೊದಗಿಸಬೇಕು ಎಂದು ಸಮುದಾಯ ಮುಖಂಡರು ಆಗ್ರಹಿಸಿದರು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ ಪಟ್ಟಣದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಪುಂಗನೂರು ಕ್ರಾಸ್ನಲ್ಲಿ ಪ್ರಸ್ಥಾಪಿಸಲಾದ ಕೆಂಪೇಗೌಡ ಪ್ರತಿಮೆಯನ್ನು ದ್ವಸಂ ಮಾಡಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೃತ್ಯ ಹಿಂದೆ ಯಾರಾದರೂ ಇದ್ದಾರೆ ಎಂಬುದನ್ನ ಪೊಲೀಸರು ತನಿಖೆ ನಡೆಸಿಬೇಕಾಗಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳವಂತೆ ಆಗ್ರಹಿಸಿದರು
.