ಶ್ರೀನಿವಾಸಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕವಿಗಳು, ಕನ್ನಡದ ಕಟ್ಟಾಳು, ಕನ್ನಡ ಭಾಷಾ ಶಿಕ್ಷಕರು, ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿದ ಪಾತ ಮುತ್ತಕಪಲ್ಲಿಯ ಎಂ. ಚಲಪತಿಗೌಡರನ್ನು ಸರ್ವಾನುತದಿಂದ ಆಯ್ಕೆಮಾಡಲಾಗಿದೆ ಎಂದು ಕ.ಸ.ಪ. ಜಿಲ್ಲಾಧ್ಯಕ್ಷಗೋಪಾಲ ಗೌಡ ತಿಳಿಸಿದರು.
ಪಟ್ಟಣದ ಕರ್ನಾಟಕ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮ್ಮೇಳನದ ಪೂರ್ವಬಾವಿ ಸಭೆ ಆಯೋಜಿಸಿ ಸಭೆಯಲ್ಲಿ ಭಾಗವಹಿಸಿದ್ದ ಪರಿಷತ್ತಿನ ಎಲ್ಲ ಪದಾಧಿಕಾರಿಗಳು, ಕರ್ನಾಟಕದ ಅಭಿಮಾನಿಗಳು, ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತವಾಗಿ ಪಾತ ಮುತ್ತಕಪಲ್ಲಿ ಚಲಪತಿ ಗೌಡರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮಾತನಾಡಿದ ಗೋಪಾಲಗೌಡ, ಸಾಹಿತ್ಯ ಪರಿಷತ್ತು ವಿಭಿನ್ನವಾಗಿ ಕೆಲಸ ಮಾಡಬೇಕಾಗಿದೆ, ಇಲ್ಲಿ ಗುಂಪುಗಾರಿಕೆ, ಪರ ವಿರೋಧಕ್ಕೆ ಅವಕಾಶ ಮಾಡಿ ಕೊಡದೆ ಎಲ್ಲರೂ ಒಮ್ಮತದಿಂದ ಕನ್ನಡದ ಕೆಲಸ ಮಾಡಲು ಮುಂದಾಗೋಣ, ಕಾರ್ಯಕ್ರಮ ಅತ್ಯಂತ ವೈಭವ ಪೂರಿತವಾಗಿ ಆಚರಿಸಲು ಸಿದ್ದರಾಗೋಣ, ಚಲಪತಿ ಗೌಡ್ರುಇದೆ ತಾಲ್ಲೂಕಿನ ಪಾತ ಮುತ್ತಕಪಲ್ಲಿ ನಿವಾಸಿಗಳಾಗಿದ್ದು, ಕನ್ನಡ ಭಾಷೆಯ ಶಿಕ್ಷಕರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಸಾಹಿತ್ಯ ಲೋಕದಲ್ಲಿ ಅಪಾರ ಕೃಷಿಯನ್ನು ಮಾಡಿರುತ್ತಾರೆ. ಜೊತೆಗೆ ಕೃತಿಗಳನ್ನು ರಚಿಸಿರುತ್ತಾರೆ. 2008ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದು, ಹಾಗೆಯೇ ಅನೇಕ ಬಿರುದುಗಳನ್ನು ಪಡೆದಿರುವ ಇವರನ್ನು ಆಯ್ಕೆ ಮಾಡಿರುವುದು ಸಂತಸದ ವಿಷಯಎಂದು ತಿಳಿಸಿದರು.
ಕ.ಸ.ಪ. ಕಾರ್ಯದರ್ಶಿ ಬೈರೇಗೌಡ ಮಾತನಾಡಿ, ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಚಲಪತಿ ಗೌಡ ಜೊತೆಗೆ ಶಂಕರೇಗೌಡ ಹೆಸರು ಪ್ರಸ್ತಾಪವಾಗಿದ್ದು, ಪರ ವಿರೋಧ ಇಲ್ಲದೆ ಈ ಬಾರಿಯಲ್ದೂರು ಹೋಬಳಿಯಲ್ಲಿ ನ್ಯಾಶನಲ್ ಹೈಸ್ಕೂಲ್ ಆವರಣದಲ್ಲಿ ಸಮ್ಮೇಳನ ನಡೆಯಲು ತೀರ್ಮಾನವಾದ್ದರಿಂದ ಆ ಭಾಗಕ್ಕೆ ಸೇರುವ ಪಾತಮುತ್ತಕಪಲ್ಲಿ ಚಲಪತಿ ಗೌಡರನ್ನು ಗುರ್ತಿಸಿ ಕಾರ್ಯಕ್ರಮ ನಡೆಸಿದರೆ ಅರ್ಥಪೂರ್ಣವಾಗಿರುತ್ತದೆ ಎಂಬ ಇವರ ಹೆಸರನ್ನು ಅಂತಿಮಗೊಳಿಸಲಾಯಿತು.ಎರಡನೇ ಸ್ಥಾನದಲ್ಲಿ ಉಳಿದ ಶಂಕರೇಗೌಡ ಕಸಬಾ ಹೋಬಳಿಗೆ ಒಳಪಡುವುದರಿಂದ ಮುಂದಿನ ವರ್ಷದ ಸಮ್ಮೇಳನಕ್ಕೆ ಇವರ ಹೆಸರನ್ನು ಪರಿಗಣಿಸಿ ಕಸಬಾ ಹೋಬಳಿಯಲ್ಲೇ ಸಮ್ಮೇಳನ ಮಾಡಲು ಅಭಿಪ್ರಾಯ ವ್ಯಕ್ತಪಡಿಸಿದಾಗ ಎಲ್ಲಕನ್ನಡ ಮನಸ್ಸುಗಳು ಒಮ್ಮತದಿಂದ ತೀರ್ಮಾನಿಸಿದರು.
ಕ.ಸ.ಪ. ಅಧ್ಯಕ್ಷಿಣಿ ಮಂಜುಳ ಮಾತನಾಡಿ, ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಪಾತಮುತ್ತಕಪಲ್ಲಿ ಚಲಪತಿಗೌಡ, ಕಸಬಾ ಹೋಬಳಿಯ ಗಾಂಡ್ಲಹಳ್ಳಿಯ ಶಂಕ್ರೇಗೌಡರ ಹೆಸರು ಪ್ರಸ್ತಾಪವಾಗಿದ್ದು, ಇವರಿಬ್ಬರ ಆಯ್ಕೆಯಲ್ಲಿ ತಳಮಳ ಗೊಂದಲವಿದ್ದು, ಶಂಕರೇಗೌಡರೇ ಉದಾರ ಮನಸ್ಸಿನಿಂದ ನನಗಿಂತ ಬಿನ್ನವಾಗಿ ಚಲಪತಿಗೌಡರೇ ಸೂಕ್ತವಾಗಿದ್ದಾರೆ, ಈ ಸಾಲಿನಲ್ಲಿ ಅವರೇ ಸೂಕ್ತ ಎಂಬ ಗೌರವದ ಮಾತನ್ನು ಪೂರ್ವ ಬಾವಿ ಸಭೆಯ ಮುನ್ನವೇ ಪ್ರಸ್ಥಾಪ ಮಾಡಿರುವ ಉಪನ್ಯಾಸ ಶಂಕರೇಗೌಡರ ಔದಾರ್ಯಕ್ಕೆ ಸಭೆಯಲ್ಲಿ ಎಲ್ಲಾ ಕನ್ನಡ ಮನಸ್ಸುಗಳ ಪರವಾಗಿ ಶಂಕರೇಗೌಡರನ್ನುಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ.ಸ.ಪ. ಜಿಲ್ಲಾ ಸಂಚಾಲಕ ಡಾ. ರವಿಕುಮಾರ್, ಗೌ. ಅಧ್ಯಕ್ಷ ಲಕ್ಷ್ಮಣ್‍ರೆಡ್ಡಿ, ಕಾರ್ಯದರ್ಶಿ ಶಿವರಾಮೇಗೌಡ, ಖಜಾನ್ಸಿ ಮುರಳಿ ಬಾಬು, ಕವಿ ಆರ್. ಚೌಡರೆಡ್ಡಿ, ಪ್ರತಿನಿಧಿಗಳಾದ ಚಂದ್ರಪ್ಪ, ನಟರಾಜ್, ರಾಮಚಂದ್ರಪ್ಪ, ಚಿಕ್ಕರೆಡ್ಡೆಮ್ಮ, ಪ್ರಸನ್ನ, ಜಾಮಕಾಯಲು ವೆಂಕಟೇಶ್, ಯಲ್ದೂರು ಮುರಳೀ ಬಾಬು, ಪ್ರತಿಕಾ ಪತಿನಿಧಿ ಆರ್. ಬಾಬು ಸೇರಿದಂತೆ ಅನೇಕರು ಭಾಗವಹಿಸಿದ್ದರು.