

ಶ್ರೀನಿವಾಸಪುರ: ತಾಲ್ಲೂಕಿನ ಆವಲಕುಪ್ಪ ಗ್ರಾಮದ ಸಮೀಪ ಭಾನುವಾರ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ.1.70 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು, ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ವಲಯ ಅಬಕಾರಿ ಇನ್ಸ್‍ಪೆಕ್ಟರ್ ಬಿ.ಎಸ್.ರೋಹಿತ್ ಮತ್ತು ಸಿಬ್ಬಂದಿ ಚುನಾವಣೆ ಪ್ರಯುಕ್ತ ಗಸ್ತು ತಿರುಗುತ್ತಿದ್ದಾಗ, ಅವಲುಕುಪ್ಪ ಗ್ರಾಮದ ಸಮೀಪ 46.8 ಲೀಟರ್ ಬಿಯರ್ ಮತ್ತು 17.28 ಲೀಟರ್ ಮದ್ಯವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಹಚ್ಚಲಾಯಿತು. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.