ಶ್ರೀನಿವಾಸಪುರ : ಎಲ್ಐಸಿ ಪ್ರತಿ ನಿಧಿಗಳು ಎಲ್ಐಸಿ ಬಗ್ಗೆ ಸಾರ್ವಜನಿಕರಿಗೆ ಪರಿಚಯ ಮಾಡಿಸಿ , ನೂತನ ಪಾಲಿಸಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಶಾಖಾ ವ್ಯವಸ್ಥಾಪಕ ಎನ್ .ಆರ್.ಸಿದ್ದೇಶ್ ಕರೆ ನೀಡಿದರು.
ಪಟ್ಟಣದ ಎಲ್ಐಸಿ ಉಪಶಾಖೆ ಕಛೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲಾನ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಎಲ್ಐಸಿ ಸಮಾಜಮುಖಿ ಕೆಲಸಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಹಾಗು ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಹಿತಕಾಯುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಪ್ರತಿನಿದಿಗಳು ನೂತನ ಪಾಲಿಸಿಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಟ್ಟು ಪಾಲಿಸಿ ಮಾಡುವಂತೆ ಪ್ರೇರಪಿಸಬೇಕು ಎಂದರು.
ಎಲ್ಐಸಿ ಷೇರುಗಳಲ್ಲಿ ನಷ್ಟ ಅನುಭವಿಸುತ್ತಿದೆ ಎನ್ನುವುದು ಸುಳ್ಳು, ಸರ್ಕಾರಕ್ಕೆ ಎಲ್ಐಸಿ ಕಂಪನಿ ವತಿಯಿಂದ ಸಮಾಜಮುಖಿ ಕೆಲಸಗಳಿಗಾಗಿ ಹಣವನ್ನು ನೀಡುತ್ತಿದೆ ಎಂದರು. ಪ್ರತಿಯೊಬ್ಬ ಪ್ರತಿನಿಧಿ ಎಲ್ಐಸಿ ಬಗ್ಗೆ ವಿಸೇಷವಾಗಿ ಹೇಳಬೇಕು ಎಂದರು.
ಸ್ಥಳಿಯ ಕಛೇರಿ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಮಾತನಾಡಿ ಖಾಸಗಿ ಕಂಪನಿಗಳಿಗೂ ಹಾಗು ಎಲ್ಐಸಿ ಕಂಪನಿಗೂ ವ್ಯತ್ಯಾಸದ ಬಗ್ಗೆ ಅರಿವು ಮೂಡಿಸಿ , ಜನಸಾಮನ್ಯರಿಗೆ ಎಲ್ಐಸಿಗೆ ಅರಿವು ಹೆಚ್ಚು ಹೆಚ್ಚು ಮೂಡಿಸಿ ಪಾಲಿಸ ಮಾಡಿಸುವಂತೆ ಕರೆ ನೀಡಿದರು.
ಅಧಿಕಾರಿ ರವಿಶಂಕರ್, ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್,ಕುಲಕರ್ಣಿ, ಶ್ರೀನಿವಾಸ್, ಲಿಖಿತ್ಕುಮಾರ್ ಇದ್ದರು.