ಶ್ರೀನಿವಾಸಪುರ 4 : ಶ್ರದ್ಧೆಯಿಂದ ಓದಿದರೆ ಯಶಸ್ಸು ಖಂಡಿತ ಕಟ್ಟಿಕಟ್ಟ ಬುತ್ತಿ ಎಂದು ಪ್ರಾಂಶುಪಾಲ ಸೀನಪ್ಪ ಕರೆನೀಡಿದರು.
ತಾಲೂಕಿನ ಮುತ್ತಕಪಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶುಕ್ರವಾರ ಪಾಮುಚ ಸಾಹಿತ್ಯ ಹಾಗು ಸಾಂಸ್ಕøತಿಕ ಸಂಸ್ಥೆ ಯಿಂದ ನಡೆದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೃಡಸಂಕಲ್ಪ , ಆತ್ಮವಿಶ್ವಾಸ, ನಿಷ್ಟೆ ಇವರಲ್ಲವೂ ಇದ್ದಾಗ ನಾವೆಲ್ಲರೂ ಸಾಧಕರ ಹಾದಿಯಲ್ಲಿ ಸಾಗಬಹುದಾಗಿದೆ , ಆದ್ದರಿಂದ ವಿದ್ಯಾರ್ಥಿಗಳು ದೊಡ್ಡಗುರಿಯನ್ನು ಹೊಂದಿ ಮುನ್ನೆಡಯಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಎಂ.ವಿ.ಬಷೀರ್ ಮಾತನಾಡಿ ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನ ಸಾಧನೆ ಮಾಡಲು ಬೇಕಾದ ಶ್ರಮವನ್ನು ಪಡೆಬೇಕು ಎಂದರು.
ಸಾಹಿತಿ ಪಾತಮುತ್ತಕಪಲ್ಲಿ ಮು.ಚಲಪತಿಗೌಡರು ನಮ್ಮ ಜಿಲ್ಲೆಯ ಅನೇಕರು ಸಾಹಿತ್ಯ ವಲಯ ಹಾಗು ನಮ್ಮ ಜಿಲ್ಲೆಯ ಅನೇಕರು ಅಧಿಕಾರ ವರ್ಗದಲ್ಲಿ ,ರಾಜಕೀಯ ಹಾಗು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸಾಧಕರಿರುವದು ಶ್ಲಾಘನೀಯ ಎಂದರು. ಈ ನೆಲದ ಜನರಿಗೆ ಸಾಧಿಸುವ ಛಲ , ಗುಣ ಇದೆ ಪ್ರತಿಯೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಹುದಾಗಿದೆ . ಆದ್ದರಿಂದ ಎಲ್ಲರೂ ಸಿಗುವ ಅವಕಾಶಗಳನ್ನು ಬಳಿಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿಗಳಾದ ಶಂಕರೇಗೌಡ , ರಾಮಾಂಜಿ, ನಿವೃತ್ತ ಶಿಕ್ಷಕ ಚಿನ್ನಪ್ಪ ಮಾತನಾಡಿದರು. ಪ್ರೌಡಶಾಲೆ 3 ವಿದ್ಯಾರ್ಥಿಗಳು , ಪದವಿ ಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರು. ಇದೇ ಸಂದರ್ಭದಲ್ಲಿ ಚೆನ್ನಪ್ಪ, ಎಂ.ವಿ.ಬಷೀರ್, ಸತೀಶ್ ರವರನ್ನ ಸನ್ಮಾನಿಸಲಾಯಿತು.
ಗ್ರಾಮದ ಮುಖಂಡರಾದ ಸಾಬುಲಾಲ್, ಹುಸೇನ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಉಪನ್ಯಾಸಕರಾದ ನವೀನ್ಕುಮಾರ್, ಲೋಕೇಶ್, ಶಿಲ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಇದ್ದರು.