ಶ್ರೀನಿವಾಸಪುರ: ಮೊಟ್ಟ ಮೊದಲಬಾರಿಗೆ ಪುರಸಭಾ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಹಿಂದೂ ಮುಸ್ಲೀಂ ಬಾಂದವ ವ್ಯಾಪಾರಿಗಳು ಗಣೇಶ ಮೂರ್ತಿಯನ್ನು ಪೂಜಿಸಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಜಲವಿಸರ್ಜನೆ ಮಾಡಿದರು.
ಇದೇ ಪ್ರಥಮಬಾರಿಗೆ ಪುರಸಭಾ ಮಾರುಕಟ್ಟೆ ವಾಣಿಜ್ಯ ಮಳಿಗೆಗಳ ಸಂಕೀರ್ಣ ವರ್ತಕರ ಸೇವಾ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದಪ್ರಯುಕ್ತ ವಿನಾಯಕನ ಮೂರ್ತಿಯನ್ನು ಆವರಣದಲ್ಲಿ 5 ದಿನಗಳು ಪೂಜಿಸಿ ಎಲ್ಲಾ ವರ್ತಕರು ಮತ್ತು ಮುಸ್ಲೀಂ ಬಾಂದವ ವ್ಯಾಪಾರಸ್ಥರು ಶಾಂತಿ ಸೌಹಾರ್ದತೆಯಿಂದ ಒಗ್ಗಟ್ಟಿನಿಂದ ಅಂಗಡಿಗಳನ್ನು ಮುಚ್ಚುವುದರಮೂಲಕ ಡೋಳ್ಳು ಕುಣಿತಗಳೊಂದಿಗೆ ಟ್ಯಾಕ್ಟರ್ ಮೂಲಕ ಗಣಪತಿಯನ್ನು ವಿಶೇಷ ಪುಷ್ಪ ಅಲಂಕಾರದೊಂದಿಗೆ ಭವ್ಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ರಥಬೀದಿಗಳಲ್ಲಿ ಮೆರವಣಿಗೆ ಮಾಡಿ ಹೊರವಲಯದಲ್ಲಿ ಜಲ ವಿಸರ್ಜನೆ ಮಾಡಲಾಯಿತು.
ಈ ವೇಳೆಯಲ್ಲಿ ಪ್ರತಿನಿತ್ಯ ಗಣಪತಿ ದೇವರಿಗೆ ಪುಷ್ಪ ಅಲಂಕಾರ ತೀರ್ಥ ಪ್ರಸಾದ ಸೇವೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅದ್ಯಕ್ಷ ಸಿ.ಮುನಿಯಪ್ಪ, ನೀಲಟೂರು ಚಿನ್ನಪ್ಪ ರೆಡ್ಡಿ, ಚಲಪತಿ, ನಜೀರ್, ಚೊಕ್ಕರೆಡ್ಡಿ, ಪೂಲು ಶೀವಾರೆಡ್ಡಿ, ಪುರಸಭೆ ಮಾಜಿ ಸದಸ್ಯ ಆಂಜಪ್ಪ, ಕೃಷ್ಣ, ಆರ್.ಹರೀಶ್, ರಂಜಿತ್, ಶ್ರೀನಾಥ್, ಡೆಲ್ಲಿ, ಮೌಲ, ಅಪ್ಪೂರ್ ಶ್ರೀನಿವಾಸ್, ಅಲ್ಲಾ ಬಕಾಶ್, ಕಿರಣ್, ನವೀನ್, ಮಂಜು, ಚೇತನ್, ರಾದಾಕೃಷ್ಣ ಅನೇಕರು ಬಾಗವಹಿಸಿದ್ದರು.