ಶ್ರೀನಿವಾಸಪುರ : ಹಣಕಾಸಿನ ಸಾಕ್ಷರತೆಯು ವ್ಯಕ್ತಿಗಳು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಗ್ರಾಹಕರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ . ವಂಚನೆಗಳಿ0ದ ತಮ್ಮನ್ನು ರಕ್ಷಿಸಿಕೊಳ್ಳಬಹುರಾಗಿದೆ ಎಂದರು. ಅರ್ಥಿಕ ಸಾಕ್ಷರತೆಯ ಫಲಿತಾಂಶಗಳನ್ನು ಸುಧಾರಿಸಲು ಪರಿಣಾಮಕಾರಿ ಮತ್ತು ಅಂತರ್ಗತ ಹಣಕಾಸು ಶಿಕ್ಷಣ ಕಾರ್ಯಕ್ರಮಗಳು ಮತ್ತು ನೀತಿಗಳ ಅವಶ್ಯಕತೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ತಿಳಿಸಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಪಟ್ಟಣದ ವಿವಿಧ ಬ್ಯಾಂಕ್ಗಳ ಸಹಯೋಗದಲ್ಲಿ ಮಂಗಳವಾರ ಅರ್ಥಿಕ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಣಕಾಸಿನ ಸಾಕ್ಷರತೆಯು ವ್ಯಕ್ತಿಗಳು ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು, ಸಾಲ ಮತ್ತು ವಂಚನೆಯನ್ನು ತಪ್ಪಿಸಲು , ಭವಿಷ್ಯಕ್ಕಾಗಿ ಯೋಜನೆ ಮತ್ತು ಅನಿರೀಕ್ಷಿತ ಘಟನೆಗಳನ್ನು ನಿಭಾಯಿಸಲು ಸಹಾಯಮಾಡುತ್ತದೆ. ಅರ್ಥಿಕ ಸಾಕ್ಷರತೆಯು ಅರ್ಥಿಕ ಸ್ಥಿರತೆ , ಅರ್ಥಿಕ ಬೆಳವಣಿಗೆ , ಸಾಮಾಜಿಕ ನ್ಯಾಯ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಮೂಲಕ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದರು.
ಶಿಕ್ಷಣ ಇಲಾಖೆಯ ಇಸಿಒ ಟಿ.ಆಂಜಪ್ಪ ಮಾತನಾಡಿ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳ ದಾಖಲಿಸದಂತೆ ಸಲಹೆ ನೀಡಿದರು. ಖಾಸಗಿ ಶಾಲೆಗಳು ಹೆಚ್ಚಿನ ಲಕ್ಷಾನುಗಟ್ಟಲೆ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಸರ್ಕಾರಿಂದ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನೇಕ ಹಲವು ಉಪಯುಕ್ತ ಯೋಜನೆಗಳನ್ನು ತಂದಿದೆ ಎಂದರು.
ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೂ ಖಾಸಗಿ ಶಾಲೆಗಳಲ್ಲಿ ಆರ್ಟಿಇ ಮೂಲಕ ದಾಖಲು ಆಗಲು ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಾಸವಿರುವ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಇಲ್ಲದ ಪಕ್ಷದಲ್ಲಿ ಖಾಸಗಿ ಶಾಲೆಯಲ್ಲಿ ಆರ್ಟಿಇ ಅರ್ಜಿ ಸಲ್ಲಿಸಿ ದಾಖಲಾತಿ ಆಗುಬಹುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಪಿಎಂಎಸ್ವೈ ವರ್ಷಕ್ಕೆ ೨೦ರೂ ಕಂತು ಕಟ್ಟಿದರೆ ೨ಲಕ್ಷ ವಿಮೆ ಬರುತ್ತದೆ. ಪಿಎಂಜೆಜೆವೈ ಯೋಜನೆಯಲ್ಲಿ ೪೩೬ರೂ ವಿಮೆ ಹಣ ಕಂತು ಕಟ್ಟಿದರೆ ೨ ಲಕ್ಷ ವಿಮೆ ಬರುತ್ತದೆ. ಎಟಿಎಂ ವಿಮೆಯಲ್ಲಿ ವರ್ಷಕ್ಕೆ ೫೦೦ ರೂ ವಿಮೆ ಕಂತು ಕಟ್ಟಿದರೆ ೧೦ ಲಕ್ಷ ವಿಮೆ ಹಣ ಬರುತ್ತದೆ., ವರ್ಷಕ್ಕೆ ೧೦೦೦ರೂ ಕಂತು ವಿಮೆ ಕಟ್ಟಿದರೆ ೨೦ ಲಕ್ಷ ರೂ ಬರುತ್ತದೆ ಎಂದು ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಬ್ಯಾಂಕುಗಳ ವಿಮೆ ಹಾಗು ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ ವೆಂಕಟರೆಡ್ಡಿ, ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ,ಆರೋಗ್ಯ ನಿರೀಕ್ಷಕ ಕೆ ಜಿ ರಮೇಶ್ ,ಪರಿಸರ ಅಭಿಯಂತರರು ಲಕ್ಷ್ಮಿಷ ,ಕಂದಾಯ ಅಧಿಕಾರಿ ವಿ ನಾಗರಾಜ್, ಕಂದಾಯ ನಿರೀಕ್ಷಕ ಎನ್ ಶಂಕರ್, ಪುರಸಭೆ ಸಿಬ್ಬಂದಿ ನಾಗೇಶ್ ,ಸಂತೋಷ್ ,ಸುರೇಶ್ ,ಗೌತಮ್ ಪ್ರತಾಪ್, ಶಿವಪ್ರಸಾದ್.ಇದ್ದರು.