ಶ್ರೀನಿವಾಸಪುರ: ರೋಟರಿ ಸಂಸ್ಥೆಯು ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪುರಸಭೆಯ ಸಿಬ್ಬಂದಿಗೆ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಪುರಸಭಾ ಅಧ್ಯಕ್ಷ ಭಾಸ್ಕರ್ ತಿಳಿಸಿದರು.
ಪಟ್ಟಣದ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ವಾಸನ್ ಐ ಕೇರ್ ವತಿಯಿಂದ ಪುರಸಭಾ ಸಿಬ್ಬಂಧಿಗೆ ಉಚಿತ ನೇತ್ರ ತಪಾಸಣಾ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದ ಭಾಸ್ಕರ್, ರೋಟರಿ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ, ಶ್ರೀನಿವಾಸಪುರ ತಾಲ್ಲೂಕಿನಲ್ಲಿಯೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇನ್ನೂ ಇಂತಹ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಾನು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ ಮಾತನಾಡಿ, ರೋಟರಿ ಸಂಸ್ಥೆಯು ಉಚಿತ ನೇತ್ರ ತಪಾಸಣಾ ಶಿಭಿರವನ್ನು ಹಮ್ಮಿಕೊಂಡು ಪುರಸಭಾ ಕಚೇರಿಯ ಸಿಬ್ಬಂಧಿಗೆ ಕಣ್ಣಿನ ತಪಾಸಣೆಯನ್ನು ನಡೆಸುತ್ತಿದ್ದು, ಏನಾದರೂ ಕಣ್ಣಿನಲ್ಲಿ ದೋಷ ಕಂಡುಬಂದರೆ ವಾಸನ್ ಐ ಕೇರ್, ಕೋಲಾರ ಇವರ ವತಿಯಿಂದ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜೋನಲ್ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿ, ಶ್ರೀನಿವಾಸಪುರದಲ್ಲಿ ರೋಟರಿ ಸಂಸ್ಥೆಯು ಪ್ರಾರಂಭವಾದಾಗಲಿನಿಂದಲೂ ಅನೇಕ ಸೇವಾ ಕಾರ್ಯಕ್ರಮಗಳಾದ ಆರೋಗ್ಯ ಶಿಭಿರವನ್ನು ಸರ್ಕಾರಿ ನೌಕರರಿಗೆ, ಕೆ.ಎಸ್.ಆರ್.ಟಿ.ಸಿ ಸಿಬ್ಬಂಧಿಗೆ, ನ್ಯಾಯಾಲಯದ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಭಿರ, ಅನೇಕ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಶಾಲಾ ಪುಸ್ತಕಗಳನ್ನು ಉಚಿತವಾಗಿ ನೀಡುವುದು, ಸರ್ಕಾರಿ ಶಾಲೆಗಳ ಕಟ್ಟಡಗಳ ಮೇಲೆ ಸುಂದರವಾದ ಚಿತ್ರಣವನ್ನು ಬಿಡಿಸುವುದು, ಮಾಸ್ಕ್ ಗಳನ್ನು ವಿತರಿಸಿರುವುದು, ಕೋವಿಡ್ ಸಮಯದಲ್ಲಿ ಅನೇಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇನ್ನು ಮುಂದೆಯು ಬಡಜನತೆಗೆ ಪ್ರಯೋಗವಾಗುವಂತೆ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಗಡಿ ಭಾಗದ ಜನತೆಗೆ ಉಪಯಕ್ತವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್, ಪುರಸಭಾ ಸದಸ್ಯರು, ಆರೋಗ್ಯಾಧಿಕಾರಿ ರಮೇಶ್ ಸೇರಿದಂತೆ ಅನೇಕ ಸಿಬ್ಬಂಧಿ, ವಾಸನ್ ಐ ಕೇರ್ನ ಸಿಬ್ಬಂಧಿ ಹಾಜರಿದ್ದರು.