ಶ್ರೀನಿವಾಸಪುರ 1 : ಒಂದು ವರ್ಷದಿಂದ ಸಮರ್ಪಕ ಮಳೆ ಬಾರದೆ,ಭೂಮಿಯಲ್ಲಿ ಉಷ್ಣಾಂಶ ಹೆಚ್ಚಿದ್ದು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೂ ಹಂತದಲ್ಲೆ ಮಾವಿನ ಫಸಲು ಉದರಿ ಡಿಸೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹೂ ಫೆಬ್ರವರಿ ತಿಂಗಳಿನಲ್ಲಿ ಬಂದಿತು ಫಸಲು ತಡವಾಗುವುದರ ಜೊತೆಗೆ ರಣ ಬಿಸಲಿನ ತಾಪಕ್ಕೆ ಕಾಯಿ ಆಗಬೇಕಿದ್ದ ಪಿಂದೆ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಬಿಳುತ್ತಿದ್ದೆ ಕೊಂಚ ದೊಡ್ಡದಾಗಿ ಬಲಿತಿದ್ದ ಮಾವಿನ ಕಾಯಿ ನೀರಿನ ಅಂಶ ಸಿಗದೆ ಬಿಸಿಲ ತಾಪಕ್ಕೆ ಸೊರಗುತ್ತಿದೆ.ಸ್ವಂತ ಟ್ರಾಕ್ಟರ್ ಹಾಗು ಟ್ಯಾಂಕರ್ ಇದ್ದವರು ಕೊನೆ ಪ್ರಯತ್ನ ಎಂಬಂತೆ ಮಾವು ಗಿಡಗಳಿಗೆ ನೀರು ಹೊಡೆಸುತಿದ್ದಾರೆ.
ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವಿನಬೆಳೆ ಮಳೆಯಿಲ್ಲದೆ ದಿನೆ ದಿನೆ ಎರುತ್ತಿರುವ ಬಿಸಿಲಿನ ತಾಪಕ್ಕೆ ಜೀವನಾಡಿ ಬೆಳೆ ಉದರಿ ಹೋಗುತ್ತಿದೆ,ಉತ್ಪಾದನೆಯಲ್ಲಿ ಶೇ.70ರಷ್ಟು ಕುಸಿತವಾಗುವ ಪರಿಸ್ಥಿತಿ ಏರ್ಪಟ್ಟಿದೆ ಬಹುತೇಕ ರೈತರು ಮಾವು ಬೆಳೆಯ ಮೇಲೆ ಅವಲಂಬಿತರಾಗಿ ಬದಕು ಸಾಗಿಸುತ್ತಾರೆ,
ಈ ಬಾರಿ ಬಿಸಿಲಿನ ತಾಪಕ್ಕೆ ಹೂ, ಪಿಂದೆಗಳು ಉದುರುತ್ತಿರುವುದನ್ನು ನೋಡಿದರೆ 10 ಟನ್ ಬರುತ್ತಿದ್ದ ಮಾವು 1-2 ಟನ್ ಸಿಗುವುದು ಅನುಮಾನವಾಗಿದ್ದು ಮಾವು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ..
ಈ ಬಾರಿಯ ಮಾವು ಹಂಗಾಮಿನಲ್ಲಿ ಫಸಲು ನೀರಿಕ್ಷೆ ಮೂಡಿಸಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಗಿಡಗಳು ಅಕಾಲಿಕವಾಗಿ ಚಿಗುರೊಡೆದು ಹೂವು,ಕಾಯಿಗಳನ್ನು ಉದುರಿಸಿದೆ.
ಔಷಧ ಸಿಂಪಡಣೆ ಹಣ ಬರುವುದು ಅನುಮಾನ
ಬಿಸಿಲ ಝಳದಿಂದ ಉಂಟಾಗಿರುವ ಹವಮಾನ ವೈಪರಿತ್ಯದಿಂದ ಮಾವುಬೆಳೆ ನಾನಾ ರೀತಿಯ ರೋಗಕ್ಕೆ ತುತ್ತಾದ ಹಿನ್ನಲೆಯಲ್ಲಿ ಬೆಳೆಯನ್ನು ಕಾಪಾಡಿಕೊಂಡು ಇಳುವರಿ ಪಡೆಯುವ ನಿಟ್ಟಿನಲ್ಲಿ ಬೆಳೆಗಾರರು ಮಾವಿನ ಹೂ,ಪಿಂದೆ ಉದುರುವಿಕೆ,ನುಸಿ ರೋಗ ನಿಯಂತ್ರಣಕ್ಕೆ, ಎಂದು ಸುಮಾರು 5-6 ಬಾರಿ ಇನ್ನೂ ಕೆಲವರು 7-8 ಬಾರಿ ಔಷಧಗಳನ್ನು ಸಿಂಪಡಣೆ ಮಾಡಿದ್ದಾರೆಯಾದರೂ ಯಾವುದೆ ಪ್ರಯೋಜನವಾಗಿಲ್ಲ.
ಹೂ ಕಾಯಿ ಉದುರುವ ಜೊತೆಗೆ ಮರಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುವ ಸನ್ನಿವೇಶ ಸೃಷ್ಠಿಯಾಗಿದೆ. ಯುಗಾದಿ ನಂತರವಾದರೂ ಮಳೆ ಸುರಿದರೆ ಇರುವಂತ ಬೆಳೆಯನ್ನು ದೇವರ ವರ ಎಂದು ಉಳಸಿಕೊಳ್ಳಲು ಸಾಧ್ಯವಾಗಬುದೇನೋ ಎಂದು ಆಶಾಭಾವನೆಯಿಂದ ಮಾವು ಬೆಳೆಗಾರರು ಹೇಳುತ್ತಾರೆ.
ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹ
ಬಿಸಿಲ ತಾಪಕ್ಕೆ ಕಣ್ಣ ಮುಂದೆ ಉದರಿ ಹೋಗುತ್ತಿದ್ದ ಜೀವನಾಡಿ ಮಾವಿನ ಬೆಳೆ ಉಳಸಿಕೊಳ್ಳಲು ಸುಮಾರು ಒಂದೂವರೆ ತಿಂಗಳಿಂದ ಔಷಧಿ ಸಿಂಪಡಣೆ ಸೇರಿದಂತೆ ಇನ್ನಿತರೆ ಖರ್ಚು ಮಾಡುತ್ತಿದ್ದರು ಮಾವಿನ ಬೆಳೆ ಉಳಸಿಕೊಳ್ಳಲು ಸಾಧ್ಯವಾಗದ ದುಸ್ಥಿಯಲ್ಲಿ ಇರುವ ಬೆಳೆಗಾರರು ಸಾಲ ಸೋಲಗಳಿಂದ ಹೈರಾಣವಾಗಿದ್ದಾರೆ ಇನ್ನೂ ಮಾವುಫಸಲಿನ್ನು ಗುತ್ತಿಗೆ ಪಡೆಯುವ ಸಣ್ಣ ಪುಟ್ಟ ವ್ಯಾಪಾರಸ್ಥರು ಎಲೆ ಮೇಲೆ ಬಂಡವಾಳ ಹಾಕಿ ನಷ್ಟಕ್ಕೆ ಈಡಾಗಿ ಕಣ್ಣೀರು ಸುರಿಸುತ್ತಿದ್ದಾರೆ.
ದಾರಿ ಕಾಣದಾಗಿದೆ
ನೋಟ್ 1 : ಮಾವಿನ ಬೆಳೆ ವ್ಯಾಪಾರವನ್ನೆ ನಂಬಿರುವ ನಮಗೆ ಕಳೆದ 3-4 ವರ್ಷಗಳಿಂದ ಇದೆ ಪರಿಸ್ಥಿತಿ ಹೀಗೆ ಮುಂದುವರೆಯುತ್ತಿದೆ ಈ ವರ್ಷ ನಾವು ಅನುಭವಿಸುತ್ತಿರುವ ಕೆಟ್ಟ ಪರಿಸ್ಥಿತಿ ಶತೃವಿಗೂ ಬೇಡ ಎಂದು ಮಾವಿನ ಫಸಲನ್ನು ಗುತ್ತಿಗೆ ಪಡೆದಿರುವ ವ್ಯಾಪಾರಸ್ಥರು ಅಲವತ್ತು ಕೊಳ್ಳುತ್ತಿದ್ದಾರೆ ನಮ್ಮ ಮುಂದೆ ಯಾವುದೆ ದಾರಿಗಳು ಕಾಣುತ್ತಿಲ್ಲ ನಮ್ಮ ಪರಿಸ್ಥಿತಿ ಹೇಳಿಕೊಳ್ಳಲಾಗದ್ದು ಎಂದು ಹೇಳುತ್ತಾರೆ.
ಸುಧಕಾರಬಾಬು . ಫಸಲು ಗುತ್ತಿಗೆ ಪಡೆದ ಗುತ್ತಗೆದಾರ.
ನೋಟ್ -2: ಕೋಲಾರ ಜಿಲ್ಲೆಯಾದ್ಯಂತ ಪ್ರಸ್ತುತ ಈ ವರ್ಷದಲ್ಲಿ ಮಾವಿನ ಗಿಡಗಳು ಹೂವ ಬಿಟ್ಟಾಗನಿಂದ ಇಲ್ಲಿಯವರೆಗೂ ಮಳೆ ಇಲ್ಲದೆ ಮಾವಿನಕಾಯಿಗಳು ನಿಂಬೆಹಣ್ಣು ಗಾತ್ರದಲ್ಲಿ ಮರಗಳಲ್ಲೇ ಒಣಗುತ್ತಿದೆ ಸುಮಾರು ತೋಟಗಳಲ್ಲಿ ನೀಲಂ ಬೇಣೀಶ ಇನ್ನೂ ಅನೇಕ ತಳಿಗಳು ಕೊಯ್ಲು ಮಾಡುವಂತೆಯೇ ಇಲ್ಲ ಅನ್ನುವ ಮಟ್ಟಕ್ಕೆ ಬತ್ತಿ ಹೋಗುತ್ತಿದೆ ತೋತಾಪುರಿ ಮಾವಿನಕಾಯಿಗಳು ಬೆಂಡಾಗಿ ಚಿಕ್ ಚಿಕ್ಕದಾಗಿಯೇ ಇದ್ದೋಗಿದೆ ಈ ವರ್ಷದಲ್ಲಿ ಮಾವ ಬೆಳೆಗಾರರು ಹಾಗೂ ತೋಟಗಳನ್ನು ಗುತ್ತಿಗೆ ಆಧಾರದಲ್ಲಿ ವ್ಯಾಪಾರ ಮಾಡಿರುವ ಸಣ್ಣ ಬಣ್ಣ ವ್ಯಾಪಾರಸ್ಥರು ಕೈ ಸುಟ್ಟಿಕೊಂಡು ಆತ್ಮಹತ್ಯೆಗಳು ಮಾಡಿಕೊಳ್ಳುವಂತಹ ಸ್ಥಿತಿ ಒದಗಿ ಬಂದಿದೆ ದಯವಿಟ್ಟು ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ತೋಟಗಳಿಗೆ ವಿಶೇಷವಾದ ಅಧಿಕಾರಿ ತಂಡಗಳನ್ನು ಕಳುಹಿಸಿ ಪರಿಶೀಲನೆ ಮಾಡಿಸಿ ಗುತ್ತಿಗೆ ಆಧಾರದಲ್ಲಿ ವ್ಯಾಪಾರ ಮಾಡಿರುವ ಸಣ್ಣ ವ್ಯಾಪಾರಸ್ಥರು ಹಾಗೂ ರೈತರ ನೆರವಿಗೆ ಬರಬೇಕೆಂದು ವಿನಂತಿಯನ್ನು ಮಾಡಿಕೊಳ್ಳುತ್ತೇವೆ .
ನೀಲಟೂರು ಚಿನ್ನಪ್ಪ ರೆಡ್ಡಿ ಅಧ್ಯಕ್ಷರು ಕೋಲಾರ ಜಿಲ್ಲಾ ಮಾವ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಶ್ರೀನಿವಾಸಪುರ”