

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭಾ ವ್ಯಾಪ್ತಿಯ ಮತಗಟ್ಟೆಗಳು ಹಾಗೂ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿರುವ ಮಸ್ಟರಿಂಗ್ ಮತ್ತು ಡಿಮಸ್ಟ್ರಿಂಗ್ ಕೇಂದ್ರಗಳು, ಆರಕ್ಷಕ ವೃತ್ತ ಕಛೇರಿ, ತಹಶೀಲ್ದಾರ್ ಕಚೇರಿ, ಗ್ರಂಥಾಲಯ, ನೂತನ ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಮಾನ್ಯ ಜಿಲ್ಲಾಧಿಕಾರಿಗಳಾದ ಅಕ್ರಂಪಾಷಾ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ನಾರಾಯಣ, ತಹಶೀಲ್ದಾರ್ ಜಿ. ಎನ್ ಸುಧೀಂದ್ರ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಪುರಸಭಾ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.


