

ಶ್ರೀನಿವಾಸಪುರ: ಪಟ್ಟಣದ ಸ್ನೇಹಿತರ ಬಳಗ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳು ವಿತರಣೆ ಮಾಡಲಾಯಿತು.
ಶ್ರೀನಿವಾಸಪುರ ಪಟ್ಟಣದ ರಂಗಾ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಮತ್ತು ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸ್ನೇಹ ಬಳಗ ವತಿಯಿಂದ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳು ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ ಸಿ ವಸಂತ, ಸಿ ಆರ್ ಪಿ. ರಾಧಾಕೃಷ್ಣ, ಮುಖ್ಯ ಶಿಕ್ಷಕ ಬೈರಾರೆಡ್ಡಿ, ಸ್ನೇಹ ಬಳಗ ದ ಸದಸ್ಯರಾದ ಪಿ ನರೇಂದ್ರ, ಶರೀಫ್ ಮೋಟರ್ ಸರ್ವಿಸ್ ಮಾಲಿಕ ನಯಾಜ್ ಅಹ್ಮದ್, ಆರ್.ವಿ. ಶ್ರೀನಾಥ್, ರಾಘವೇಂದ್ರ, ಹರೀಶ್ ,ಆರ್ ನರೇಂದ್ರನಾಥ್, ಸುಬ್ರಮಣಿ, ನಾರಾಯಣಸ್ವಾಮಿ, ಉಪಸ್ಥಿರಿದ್ದರು