ಶ್ರೀನಿವಾಸಪುರ.ರೈತರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಸಹಕಾರಿಯಾಗಿದ್ದು, ರೈತರು ಹೆಚ್ಚಿನ ಠೇವಣಿ ಇಟ್ಟರೆ ಡಿಸಿಸಿ ಬ್ಯಾಂಕ್ವತಿಯಿಂದ ಸಾಲ ನೀಡಲು ಸಾಧ್ಯವಾಗುತ್ತದೆ ಎಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬೈರಪಲ್ಲಿ ಬಿ. ವಿ.ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರ ಹಾಗೂ ರೈತರ ಸೇವಾ ಸಹಕಾರ ಸಂಘ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿ ಕಸಬಾ ಸೊಸೈಟಿ ಉತ್ತಮ ಹಾಗೂ ಸುಂದರವಾಗಿ ಕಟ್ಟಡ ಹೊಂದಿದೆ. ಬ್ಯಾಂಕಿನ ಎಲ್ಲಾ ವ್ಯವಹಾರಗಳಿಗೆ ಅನುಕೂಲವಾಗಲಿದೆ, ಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ಕಲ್ಪಿಸಿದ್ದೇವೆ. ಆದರೆ ಜನರು ಸೌಲಭ್ಯ ಪಡೆದುಕೊಂಡು ತಮ್ಮ ಉಳಿತಾಯ ಹಣವನ್ನು ವಾಣಿಜ್ಯ ಬ್ಯಾಂಕ್ಗಳಲ್ಲಿ ಇಟ್ಟಿದ್ದಾರೆ. ಸಹಕಾರಿ ವ್ಯವಸ್ಥೆಯು ಉಳಿವಿಗಾಗಿ ಈ ಬ್ಯಾಂಕ್ಗಳಲ್ಲಿ ಠೇವಣಿ ಇಡುವಂತೆ ರೈತರಿಗೆ ಮನವಿ ಮಾಡುತ್ತಾ ಈಗಾಗಲೇ ನಾವು ಡಿಸಿಸಿ ಬ್ಯಾಂಕ್ವತಿಯಿಂದ ಸಾಲವನ್ನು ನೀಡಿದ್ದೇವೆ. ಪಟ್ಟಣದ ಬಹುತೇಕ ಜನರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲ. ಅಂತಹವರಿಗೆ ಮುಂದಿನ ದಿನಗಳಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೆಯೇ ಪಾಳ್ಯ ಗ್ರಾಮದ ರೈತರಿಗೂ ಸಾಲವನ್ನು ನೀಡಿದ್ದೇವೆ. ಕೂಡಲೆ ಸಾಲವನ್ನು ಕಟ್ಟಬೇಕು ಇಲ್ಲದಿದ್ದ ಪಕ್ಷದಲ್ಲಿ ಸರ್ಕಾರದ ಆದೇಶದಂತೆ ನೋಟೀಸ್ನ್ನು ನೀಡಲಾಗುವುದು. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಇನ್ನೊಬ್ಬರಿಗೆ ಸಾಲವನ್ನು ನೀಡಲು ಅನುಕೂಲವಾಗುತ್ತದೆ. ರೈತರು ಹಾಗೂ ಷೇರುದಾರರು ಈ ಬ್ಯಾಂಕಿನ ಎರಡು ಕಣ್ಣುಗಳು ಇದ್ದಾಗೆ ನಾವು ಸಹ ರೈತರಿಗೆ ಕೆಸಿಸಿ ಸಾಲ ಸ್ತ್ರೀ-ಶಕ್ತಿ ಸಂಘಗಳಿಗೆ ಸಾಲವನ್ನು ನೀಡಿದ್ದೇವೆ. ಸಾಲವು ವಸೂಲಿ ಆಗುತ್ತದೆ. ಕೆಲವರಿಂದ ಆಗುತ್ತಿಲ್ಲ. ಇದಕ್ಕೆ ಅವಕಾಶ ಮಾಡಿಕೊಡದೆ ಎಲ್ಲರೂ ಸಂಘದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಶಿವಾರೆಡ್ಡಿ, 2023-24ನೇ ಸಾಲಿನ ತಾತ್ಕಾಲಿಕ ಜಮಾ ಖರ್ಚು, ಲಾಭ-ನಷ್ಟ, ಆಸ್ತಿ ಜವಾಬ್ದಾರಿ ತಃಖ್ತೆಗಳನ್ನು ಓದಿ ಅಂಗೀಕರಿಸುವ ಜೊತೆಗೆ 2024-25ನೇ ಸಾಲಿನ ಅಂದಾಜು ಬಜಟ್ನ್ನು ಓದಿ ಮಂಜೂರು ಪಡೆದರು ಹಾಗೆಯೇ 2024-25ನೇ ಸಾಲಿ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡುವದರ ಜೊತೆಗೆ ಚೆರ್ಚೆಸಿ ಅಂಗೀಕಾರ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಪ್ರಭಾರಿ ಅಧ್ಯಕ್ಷಣಿ ಶಾಂತಮ್ಮ, ನಿರ್ದೇಶಕರಾದ ಸಿ. ನಾರಾಯಣಸ್ವಾಮಿ, ಸಿ. ಮುನಿವೆಂಕಟಪ್ಪ, ಟಿ. ರಾಮಚಂದ್ರಪ್ಪ, ಎಂ, ಬೈರಾರೆಡ್ಡಿ, ಹೆಚ್.ಎಸ್.ಮುನಿಯಪ್ಪ, ಮುನಿಸ್ವಾಮಿ, ಶ್ರೀಮತಿ ಭಾಗ್ಯಮ್ಮ, ಶಬ್ಬೀರ್ ಅಹ್ಮದ್ ಪಾಷ, ಮುಖಂಡರಾದ ಕೇತಗಾನಹಳ್ಳಿ ನಾಗರಾಜ್, ನಾಗದೇನಹಳ್ಳಿ ಸೀತಾರಾಮರೆಡ್ಡಿ, ಯಲವಕುಂಟೆ ಬೈರಾರೆಡ್ಡಿ, ವರ್ತನಹಳ್ಳಿ ವೆಂಕಟರಾಮರೆಡ್ಡಿ, ಅಲಂಬಗಿರಿ ಮನೋಹರ್, ಮೊಗಿಲಹಳ್ಳಿ ಬಾಬು, ಚಲ್ದಿಗಾನಹಳ್ಳಿ ಸಂಪತ್ಕುಮಾರ್, ಹಾಗೂ ಸಂಘದ ನಗದು ಗುಮಾಸ್ತೆ ಎಂ. ದೇವಿಕ ಇದ್ದರು.