

ಶ್ರೀನಿವಾಸಪುರ 1 : ಸ್ವಚ್ಚ ಭಾರತ ಅಭಿಯಾನವು ಭಾರತವು ಸ್ವಚ್ಚ ಮತ್ತು ಉತ್ತಮವಾಗಲು ಸಾಧಿಸಲು ಸಾಕಷ್ಟು ಗುರಿಗಳನ್ನು ಹೊಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.
ಪಟ್ಟಣ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಚ ಭಾರತ ಅಭಿಯಾನವು ಭಾರತಕ್ಕೆ ಹೆಚ್ಚು ಅಗತ್ಯವಿರುವ ಉಪಕ್ರಮವಾಗಿದೆ. ಏಕೆಂದರೆ ಕಳಪೆ ಶುಚಿತ್ವ ದಿಂದ ಪರಿಸರ ಹಾಗು ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರುವುದರಿಂದ ನಾವೆಲ್ಲರೂ ಸೇರಿ ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿರುವುದು ಮುಖ್ಯವಾಗಿದೆ.
ಈ ಹಿಂದೆ ಸ್ಚಚ್ಚತೆ ಹಾಗು ನೈರ್ಮಲ್ಯ ಇಲ್ಲದ ಕಾರಣ ಕಾಯಿಲೆಗಳಿಂದ ಲಕ್ಷಾಂತರ ಸಾವು ನೋವುಗಳ ವರಧಿಯಾಗಿದೆ. ಸಾರ್ವಜನಿಕರು ಸ್ವಚ್ಚತೆಯ ಅಗತ್ಯತೆ ಮತ್ತು ಅವರ ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿಯವರು ತಮ್ಮ ಕನಸಿನಂತೆ ಸ್ವಚ್ಚ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು. ಮತ್ತು ಈ ಸಮಯದಲ್ಲಿ ಅವರು ತಮ್ಮ ಅಭಿಯಾನ ಮತ್ತು ಘೋಷಣೆಗಳ ಮೂಲಕ ಜನರನ್ನು ಪ್ರೇರೇಪಿಸುವ ಮೂಲಕ ಸ್ವಚ್ಚ ಭಾರತಕ್ಕಾಗಿ ಪ್ರಯತ್ನಿಸಿದರು. ಇಂದು ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮಿಷನ್ ಆರಂಭಿಸಿ ದೇಶಾದ್ಯಾಂತ ಜಾಗೃತಿ ಮೂಡಿಸಿ, ದೇಶಾದ್ಯಾಂತ ಸ್ವಚ್ಚತಾ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದರು.
ಅಪರ ಸಿವಿಲ್ ನ್ಯಾಯದೀಶರಾದ ಹೆಚ್ .ಆರ್. ಸಚಿನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ, ಬಿಇಒ ಕೆ.ಭಾಗ್ಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್‍ಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯಾಧಿಕಾರಿ ಕೆ.ಜೆ.ರಮೇಶ್ ಇದ್ದರು.