ಶ್ರೀನಿವಾಸಪುರ : ಪೌರಕಾರ್ಮಿಕರು ದಿನ ಬೆಳಗಾದರೆ ಪಟ್ಟಣದಲ್ಲಿ ಸ್ವಚ್ಚತೆ ಮಾಡಿ ನಮ್ಮೆಲ್ಲರನ್ನೂ ಆರೋಗ್ಯ ಜೀವನವನ್ನು ನಡೆಸಲು ಕಾರಣೀಬೂತರಾಗಿರುವ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಡವಾಗಿರಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಅಮಾನಿಕೆರೆ ಕ್ರೀಡಾಂಗಣದಲ್ಲಿ ಸೋಮವಾರ ಪುರಸಭೆಯ ಪೌಕಾರ್ಮಿಕರಿಗೆ ಹಮ್ಮಿಕೊಳ್ಳಾದ ಕ್ರೀಡಾಕೂಟವನ್ನು ಉದ್ಗಾಟಿಸಿ ಮಾತನಾಡಿದರು.
ಗಿಡಮರಗಳು ಆಮ್ಲಜನಕವನ್ನು ಉತ್ಪತ್ತಿ ಮಾಡಲು ಎಷ್ಟು ಮುಖ್ಯವೋ, ಪಟ್ಟಣದಲ್ಲಿ ಸ್ಚಚ್ಚತೆ ಮಾಡಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರು ಅಷ್ಟೆ ಮುಖ್ಯ ಎಂದರು.
ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಪೌರಕಾರ್ಮಿಕರು ದೈಹಿಕವಾಗಿ, ಮಾನಸಿಕವಾಗಿ ಸದೃಡವಾಗಿರಲು ಒಂದಿಷ್ಟು ಉಲ್ಲಾಸವಾಗಿರುಲು ಕ್ರೀಡೆಗಳು ಸಹಕಾರಿಯಾಗುತ್ತದೆ. ಪೌರಕಾರ್ಮಿಕರು ಆರೋಗ್ಯವಂತರಾಗಿದ್ದರೆ ನಗರವನ್ನು ಆರೋಗ್ಯವನ್ನು ಕಾಪಾಡುವುದರ ನಗರವನ್ನು ಸ್ವಚ್ಚವಾಗಿ , ಸುಂದರವಾಗಿ ಇಡಲು ಸಾಧ್ಯವಾಗುತ್ತದೆ.
ಉಪಾಧ್ಯಕ್ಷೆ ಸುನಿತಾ, ಸದಸ್ಯ ಉನಿಕಿಲಿ ಎನ್ಎನ್ಆರ್ ನಾಗರಾಜ್, ಆರೋಗ್ಯ ಅಧಿಕಾರಿ ಕೆ.ಜೆ.ರಮೇಶ್, ಕಂದಾಯ ನಿರೀಕ್ಷಕ ಶಂಕರ್, ಕಚೇರಿ ಸಿಬ್ಬಂದಿ ವರ್ಗದವರಾದ ನಾಗೇಶ್, ಸುರೇಶ್, ಸಂತೋಷ್, ಶಿವಪ್ರಸಾದ್, ಶಾರದ, ಭಾಗ್ಯಮ್ಮ, ಗೌತಮ್, ಮನೋಜ್, ಚಂದು, ವೇದಾಂತ್, ಮುಖಂಡರಾದ ಮಂಜುನಾಥ್,ನವಾಜ್,ಪೌರಕಾರ್ಮಿಕರ ಅಧ್ಯಕ್ಷ ಬಾಲಕೃಷ್ಣ, ಹಾಗು ಪೌರಕಾರ್ಮಿಕರು ಇದ್ದರು.
.