ಶ್ರೀನಿವಾಸಪುರ: ಮಕ್ಕಳು ಜವಾಹರಲಾಲ್ ನೆಹರು ಅವರ ಆದರ್ಶ ಪಾಲಿಸಬೇಕು ಎಂದು ನವಕರ್ನಾಟಕ ಸ್ವಾಭಿಮಾನ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಹ್ಮದ್ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ನೆಹರು ಅವರಿಗೆ ಮಕ್ಕಳೆಂದರೆ ಅತೀವ ಪ್ರೀತಿ ಇತ್ತು. ಹಾಗಾಗಿಯೇ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆ ಹೆಸರಲ್ಲಿ ಆಚರಿಸುವಂತೆ ಹೇಳಿದ್ದರು ಎಂದು ಹೇಳಿದರು.
ಉರ್ದು ಶಾಲೆಯಲ್ಲಿ ಓದುವ ಮಕ್ಕಳು ಭವಿಷ್ಯದ ದೃಷ್ಟಿಯಿಂದ ಕನ್ನಡ ಕಲಿಯಬೇಕು. ಈಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಮಕ್ಕಳು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಸೇರಬೇಕು ಎಂದು ಸಲಹೆ ಮಾಡಿದರು.
ಮುಖ್ಯ ಶಿಕ್ಷಕ ಸಾದಿಕ್, ಎಸ್‍ಡಿಎಂಸಿ ಅಧ್ಯಕ್ಷ ಇದಾಯತ್ ಉಲ್ಲಾ ಖಾನ್, ಶಿಕ್ಷಕಿಯರಾದ ನಗೀನಾ ತಾಜ್, ರಿಯಾನಾ ಖಾನಂ, ನೂರುನ್ನೀಸಾ, ಅಮ್ಮಾಜಾನ್, ವೇದಿಕೆ ಸದಸ್ಯರಾದ ಬಕಾಶ್, ಸಾಬೀರ್, ಅಬ್ದುಲ್ಲಾ ಇದ್ದರು.