ಶ್ರೀನಿವಾಸಪುರ : ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ ಹೆಸರಘಟ್ಟ, ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೋಲಾರ ರವರ ನುರಿತ ವಿಜ್ಞಾನಿಗಳಿಂದ ರೈತರಿಗೆ ಮಾವು ಬೆಳೆಯ ಬಗ್ಗೆ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘ, ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮಂಡಳಿ ಕೃಷಿ ಇಲಾಖೆ ರವರ ಸಹಯೋಗದೊಂದಿಗೆ ಮಾವು ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರವನ್ನು ಪಟ್ಟಣದ ಶ್ರೀ ಮಾರುತಿ ಸಭಾ ಭಾವನದಲ್ಲಿ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಹಿರಿಯ ವಿಜ್ಞಾನಿ ಕಮಲ ರವರು ಭಾರತ ದೇಶದಲ್ಲಿ ಶ್ರೀನಿವಾಸಪುರ ತಾಲ್ಲೂಕಿನಲ್ಲೇ ಅತೀ ಹೆಚ್ಚಾಗಿ ಮಾವು ಬೆಳೆಯನ್ನು ಬೆಳೆಯಲಾಗುತ್ತಿದೆ ಹಾಗೂ ಪ್ರಪಂಚಕ್ಕೆ ಪ್ರಸಿದ್ಧವೆಂದು ಹೆಸರು ಗಿಟ್ಟಿಸಿದೆ. ಆದ್ರೆ ಈ ಪೈಕಿ ಕನಿಷ್ಠ 2 % ರಷ್ಟು ಮಾವು ಹೊರ ರಾಜ್ಯಗಳಿಗೆ ರಫ್ತುಗೊಳ್ತಿದೆ. ಇದಕ್ಕೆ ಮುಖ್ಯ ಕಾರಣ ಕೆಮಿಕಲ್ ರಾಸಾಯನಿಕ ಮತ್ತು ಗುಣಮಟ್ಟದ ಕೊರತೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾವು ಬೆಳೆಯುವ ವಿಧಾನವು ಸಂಪೂರ್ಣವಾಗಿ ಬದಲಾಗಿ ರೈತ ನಷ್ಟಕ್ಕೆ ಗುರಿಯಗುತ್ತಿದ್ದು, ವಿಜ್ಞಾನಿಗಳು ಹಾಗೂ ಇಲಾಖೆ ಅಧಿಕಾರಿಗಳ ಸೂಚಿನೆಯಂತೆ ಮಾವು ಬೆಳೆಯುವ ವಿಧಾನವನ್ನು ಪಾಲಿಸಲು ಹೇಳಿ ರೈತರಿಗೆ ಗುಣಮಟ್ಟದ ಮಾವು ಬೆಳೆಯಲು ಮತ್ತು ಹಾಗುಹೋಗುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿಗಳಾದ ಕಮಲ ಜಯಂತಿ, ವಿಜ್ಞಾನಿ ಡಾ. ಮಂಜುನಾಥರೆಡ್ಡಿ , ಅನಿಲ್ ಕುಮಾರ್, ಮಾವು ಮಂಡಳಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಉಪ ನಿರ್ದೇಶಕರಾದ ಕುಮಾರ ಸ್ವಾಮಿ, ಕೆ ಸಿ ಮಂಜುನಾಥ್ (ಕೃಷಿ ಇಲಾಖೆ), ಪ್ರಾಂತರೈತ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯ ನಾರಾಯಣ,ಎಂ ಬೈರಾರೆಡ್ಡಿ, ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ, ನವೀನ್ ಕುಮಾರ್, ಸ್ಯೆಯ್ಯದ್ ಖಾದರ್, ಬೈಚೇಗೌಡ, ಕೃಷ್ಣಾರೆಡ್ಡಿ, ನಾಬಾರ್ಡ್ ಬ್ಯಾಂಕ್ನ ಡಾ. ವೆಂಕಟೇಶ್, ಆರ್ ವೆಂಕಟೇಶ್ ಜಂಟಿ ಕಾರ್ಯದರ್ಶಿ, ದೇವರಾಜಯ್ಯ, ರೈತ ಹಾಗೂ ಪ್ರಾಂತ ಸಂಘದ ಪದಾಧಿಕಾರಿಗಳು ಇಲಾಖಾ ಸಿಬ್ಬಂದಿ ಮತ್ತು ರೈತರು ಇದ್ದರು.