

ಶ್ರೀನಿವಾಸಪುರ : ಪಟ್ಟಣದ ಹೊರವಲಯ ಈದ್ಗ ಹತ್ತಿರದ ಆಂಬೀಷನ್ ನ್ಯಾಷನಲ್ ಶಾಲೆಗೆ ಸಮಾಜ ಸೇವಕ ಎಸ್ ನಾರಾಯಣಸ್ವಾಮಿ ಅವರು ಭೇಟಿ ನೀಡಿ ಶಾಲೆಯ ಕಾಮಗಾರಿಕೆಯನ್ನು ವೀಕ್ಷಿಸಿ ಅವರ ತಾಯಿ ದಿವಂಗಿತ ಶ್ರೀಮತಿ ಶಾರದಮ್ಮ ಅವರ ಹೆಸರಲ್ಲಿ ಶಾಲೆಯ ಒಂದು ಕಟ್ಟಡವನ್ನು ನಿರ್ಮಿಸಲು 3,50,000ವನ್ನು ದಾನ ಮಾಡಿದ್ದು ಇದೇ ಸಂದರ್ಭದಲ್ಲಿ ಮಾತನಾಡುತ್ತ ನಾನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಓದಿದ್ದು ಬೆಳೆದು ನಮ್ಮ ತಾಯಿಯವರು ಸರ್ಕಾರಿ ಶಾಲೆಯಲ್ಲಿ ಕೆಲಸವನ್ನು ನಿರ್ವಹಿಸಿದ್ದರು ಹೈದರ್ ಅಲಿ ಮೊಹಲ್ಲಾ ನಿವಾಸಿಗಳಾಗಿದ್ದು ನಾನು ನನ್ನ ಸ್ವಂತ ಖರ್ಚಿನಲ್ಲಿ ಶಾಲೆಯ ಕಟ್ಟಡವನ್ನು ನಿರ್ಮಿಸಲು ನಮ್ಮ ತಾಯಿ ಹೆಸರಿನಲ್ಲಿ ದಾನವನ್ನು ಮಾಡಿದ್ದೇನೆ ಹಾಗೂ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಇಲ್ಲಿನ ಶಾಲೆಯ ಒಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು ಆತನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಅಧ್ಯಕ್ಷ ಜಾಹಿದ್ ಅನ್ಸಾರಿ ಶಾಲೆಯ ಆಡಳಿತ ಮಂಡಳಿ ಸದಸ್ಯ ಎಂಕೆಎಸ್ ಮುಬಿನ್ ಬಾಬು ಎಂಡಿ ಶಬ್ಬೀರ್ ಮತ್ತು ಶಾಲೆಯ ಸಿಬ್ಬಂದಿ ಇದ್ದರು
