

ಶ್ರೀನಿವಾಸಪುರ: ಪಟ್ಟಣದ ಶ್ರೀರಾಮ ಭಜನೆ ಮಂದಿರದಲ್ಲಿ ಸೋಮವಾರ ಅಯೋಧ್ಯ ಪ್ರತಿಷ್ಟಾಪನೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಾಗು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಮೋಹನಾಚಾರಿ, ಮುಖಂಡರಾದ ರಾಮಚಂದ್ರಾಚಾರಿ, ಶ್ರೀಧರ್ ಇತರರು ಪಾಲ್ಗುಂಡಿದ್ದರು.