ಶ್ರೀನಿವಾಸಪುರ : ಪಟ್ಟಣದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಛೇರಿ ಮುಂದೆ ಬುಧವಾರ ಶ್ರೀನಿವಾಸಪುರ ತಾಲೂಕು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಬಳಗದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಬಳಗದ ರಾಜ್ಯಾಧ್ಯಾಧ್ಯಕ್ಷ ಕೋದಂಡರಾಮ ಮಾತನಾಡಿ ತಾಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿನ ದಲಿತ ಕಾಲೋನಿಯಲ್ಲಿ ಸರ್ಕಾರಿ ರಸ್ತೆಗೆ ಹನುಮಯ್ಯ ಬಿನ್ ಲೇಟ್ ಮುನಿಬೈರಪ್ಪ ಮತ್ತು ಮಕ್ಕಳು ಸೇರಿ ಸರ್ಕಾರಿ ರಸ್ತೆಗೆ ಅಡ್ಡಲಾಗಿ ಕಾಂಪೌಡ್ ಮತ್ತು ಮನೆಯ ಶೆಡ್ನ್ನು ನಿರ್ಮಿಸುತ್ತಿದ್ದು, ಇದರಿಂದ ದಲಿತ ಕಾಲೋನಿ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಪಡೆಯಲು ತುಂಬಾ ತೊಂದರೆಯಾಗಿ ಮತ್ತು ಸುಮಾರು ಕುಟುಂಬಗಳು ಗ್ರಾಮ ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಬಂದಿರುತ್ತದೆ.
ಕಳೆದ ಜನವರಿ 19 ರಂದು ಸ್ಥಳಕ್ಕೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎಸ್.ಶಿವಕುಮಾರಿ ಬೇಟಿ ಸ್ಥಳ ಪರಿಶೀಲಿಸಿದರು. ಇದೇ ಸಮಯದಲ್ಲಿ ರಸ್ತೆ ತೆರೆಗೊಳಿಸುವ ಬಗ್ಗೆ ಮೌಖಿಕವಾಗಿ ಮತ್ತು ನೋಟೀಸ್ ಮೂಲಕ ತಿಳಿಸಿದ್ದರೂ , ಸರ್ಕಾರಿ ರಸ್ತೆಗೆ ಅಡ್ಡಲಾಗಿ ಕಾಂಪೌಡ್ ಮತ್ತು ಮನೆಯ ಶೆಡ್ನ್ನು ನಿರ್ಮಿಸುತ್ತಿದ್ದು ತೆರೆವಿಗೆ ಪಿಡಿಒ 15 ದಿವಸ ಸಮಯ ತೆಗೆದುಕೊಂಡು ಸಮಯ ಮುಗಿದರು ತೆರವುಗೊಳಿಸದ ಕಾರಣ ಶ್ರೀನಿವಾಸಪುರ ಪಟ್ಟಣದ ಕಛೇರಿ ಮುಂಭಾಗ ಮಾರ್ಚ್ 7 ಸೋಮವಾರ ದಿಂದ ನ್ಯಾಯ ಸಿಗುವವರೆಗೂ ಶಾಂತಿಯುತವಾಗಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮತ್ತು ಇಒ ಎಸ್. ಶಿವಕುಮಾರಿ ಮಧ್ಯಪ್ರವೇಶಿಸಿ ಗುರುವಾರ ತಾಲೂಕು ಇಒ ಕೋರ್ಟ್ನಲ್ಲಿ ಈ ಪ್ರಕರಣದ ಬಗ್ಗೆ ವಾದವಿವಾದಗಳು ನಡೆಯಲಿದ್ದು, ಕೋರ್ಟ್ನಿಂದ ಬರುವ ಆದೇಶದಂತೆ ನಂತರ ಈ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಜಿ.ಎನ್.ಸುದಿಂದ್ರ ಹೇಳಿದರು.
ಇದೇ ಸಮಯದಲ್ಲಿ ಪಟ್ಟಣದ ಅರಕ್ಷಕ ವೃತ್ತ ನಿರೀಕ್ಷರಿಗೆ ಸೂಕ್ತ ರಕ್ಷಣೆಗಾಗಿ ದೂರನ್ನು ನೀಡಿದ್ದಾರೆ.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಇ.ಮಂಜು , ಉಪಾಧ್ಯಕ್ಷ ಆನಂದ್ಕುಮಾರ್, ರಾಜ್ಯಕಾರ್ಯದರ್ಶಿ ಎಂ.ರಾಜೇಂದ್ರಬಾಬು, ಜಿಲ್ಲಾಧ್ಯಕ್ಷ ನಾಗೇಶ್, ಜಿಲ್ಲಾ ಸಂಘನಾ ಕಾರ್ಯದರ್ಶಿ ಎಂ.ಮುನಿರಾಜು, ತಾಲೂಕು ಅಧ್ಯಕ್ಷ ವೈ.ವಿ.ಶ್ರೀನಾಥ್, ತಾಲೂಕು ಉಪಾಧ್ಯಕ್ಷ ಎಚ್.ಎಂ.ಅರುಣ್ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಕಾರ್ಯದರ್ಶಿ ಮೋಹನ್ಕುಮಾರ್, ಉಪಕಾರ್ಯದರ್ಶಿ ವಿನಾಯಕ್ , ಸಲಹೆಗಾರ ವಕೀಲ ಸಿ.ಎಂ.ಮಂಜುನಾಥ್, ಚಿಂತಾಮಣಿ ತಾಲೂಕು ಅಧ್ಯಕ್ಷ ಶ್ರೀನಾಥ್, ಮುಖಂಡರಾದ ಕೆ.ಎನ್. ಅರುಣ, ಲಕ್ಷ್ಮೀದೇವಮ್ಮ, ಋಕ್ಮಣಿಮ್ಮ, ಅಕ್ಷಯ್ಕುಮಾರ್, ಜಿ.ಎಂ.ಜಗದೀಶ್ಕುಮಾರ್, ಮುನಿತರ್ನಮ್ಮ, ಕೆ.ವಿ.ಭವಾನಿ, ರವಿ ಇದ್ದರು.