ಶ್ರೀನಿವಾಸಪುರ : ತಾಲೂಕಿನ ರೈತಾಪಿ ಕುಟುಂಬಗಳು ಹಾಗು ಇತರೆ ಸಾಮಾನ್ಯ ಕುಟುಂಗಳ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅವರ ಕನಸು ನನಸು ಮಾಡುವ ಉದ್ದೇಶದಿಂದ ನಮ್ಮ ಶಾಲೆಯು ಕಡಿಮೆ ಶುಲ್ಕವನ್ನು ಪಡೆದು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಹಾಗೂ ಶಿಸ್ತು ಕೊಡುವುದರ ಮೂಲಕ ವಿದ್ಯಾರ್ಥಿಗಳ ಪೋಷಕರ ಕನಸು ನನಸು ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ವಿಐಪಿ ಶಾಲಾ ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್. ವೇಣುಗೋಪಾಲರೆಡ್ಡಿ ಹೇಳಿದರು.
ತಾಲೂಕಿನ ರೋಣೂರು ಕ್ರಾಸ್ ಬಳಿ ವಿಐಪಿ ಶಾಲೆಯಲ್ಲಿ ಮಂಗಳವಾರ ಶಾಲಾ ಆಡಳಿತ ಮಂಡಲಿ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ನಮ್ಮ ಶಾಲೆಯಲ್ಲಿ ಒಟ್ಟು ೫೦ ವಿದ್ಯಾರ್ಥಿಗಳು ಪರೀಕ್ಷೆ ಬರಿದಿದ್ದರು. ಈ ೫೦ ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ನೂರ ರಷ್ಟು ಫಲಿತಾಂಶ ನಾಲದ್ಕನೇ ಬಾರಿಯೂ ಬಂದಿದೆ. ಇದರಲ್ಲಿ ಅತ್ಯುನ್ನತ ಶ್ರೇಣಿ – ೦೭, ಉನ್ನತ ಶ್ರೇಣಿ – ೧೦, ಪ್ರಥಮ ಶ್ರೇಣಿ -೧೫, ದ್ವಿತೀಯ ಶ್ರೇಣಿ – ೧೨, ತೃತೀಯ ಶ್ರೇಣಿ -೦೬ ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.
ನಮ್ಮ ಶಾಲೆಯು ಪ್ರಾರಂಭವಾಗಿ ೯ ವರ್ಷಗಳು ಕಳೆದಿವೆ. ಇದುವರೆಗೂ ೩ ಬ್ಯಾಚ್ ವಿದ್ಯಾರ್ಥಿಗಳು ಸಿಬಿಎಸ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಪಾಸಿಗಿದ್ದು, ೪ನೇ ಬ್ಯಾಚ್ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುತ್ತಾರೆ. ಎಂದು ಮಾಹಿತಿ ನೀಡುತ್ತಾ,
ಇದುವೆರಗೂ ಜಿಲ್ಲೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ದ್ವೀತೀಯ ಸ್ಥಾನ ಪಡೆಯುತ್ತಿದ್ದರು. ಆದರೆ ಈ ಸಾಲಿನಲ್ಲಿ ವಿಶೇಷವೆಂದರೆ ನಮ್ಮ ಶಾಲೆಯ ಸುರಭಿ ಜಿ. ಶಂಕರ್ ಎಂಬುವ ವಿದ್ಯಾರ್ಥಿನಿಯು ೪೮೩ ಅಂಕಗಳು (೯೭%) ಜಿಲ್ಲೆಗೆ ಅತಿಹೆಚ್ಚು ಅಂಕಗಳನ್ನು ಪಡೆದಿರುವ ಹೆಗ್ಗಳಿಕೆ ಕಾರಣರಾಗಿದ್ದು , ಶಾಲೆಗೆ ಹಾಗು ಪೋಷಕರಿಗೆ ಒಳ್ಳೇಯ ಕೀರ್ತಿಯನ್ನು ತಂದಿದ್ದಾಳೆ ಎಂದು ವಿದ್ಯಾರ್ಥಿಯನ್ನು ಅಭಿನಂದಿಸಿದರು.
ಶಾಲೆಯು ನೂರಕ್ಕೆ ನೂರ ರಷ್ಟುಫಲಿತಾಂಶಕ್ಕೆ ಕಾರಣರಾದ ಪ್ರಾಂಶುಪಾಲರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳ ಪೋಷಕರಿಗೆ ಹಾಗು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿದ್ದೇನೆ ಎಂದರು.
ವಿಐಪಿ ಶಾಲಾ ಆಡಳಿತ ಮಂಡಲಿ ಕಾರ್ಯದರ್ಶಿ ಡಾ|| ಕವಿತಾ, ಪ್ರಾಂಶುಪಾಲೆ ಎಂ.ಅಸ್ಮಾ ತಬ್ಸುಮ್, ಉಪಪ್ರಾಂಶುಪಾಲೆ ದೀಪ, ಮುಖ್ಯ ಶಿಕ್ಷಕ ಜಾಬಿಲ್ಪಾಷಾ ಇದ್ದರು.