ಶ್ರೀನಿವಾಸಪುರ : ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳ ಬಗ್ಗೆ ಇತ್ತೀಚಿಗೆ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 57 ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದ್ವಿಚಕ್ರ ವಾಹನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಬಿ.ನಿಖಿಲ್ ಮಾಹಿತಿ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ , ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಪಬ್ಲಿಕ್ ಸೇಫ್ಟಿ ಆಕ್ಟ್ ಪ್ರಕಾರ 50 ಜನರಿಕ್ಕಿಂತ ಹೆಚ್ಚು ಸೇರುವ ಅಂಗಡಿಗಳಲ್ಲಿ ಮಾಲೀಕರು ಸಿಸಿ ಕ್ಯಾಮಾರ ಖಂಡಿತ ಅಳವಡಿಸಬೇಕಾಗಿದೆ. ಆ ಅಂಗಡಿ ಮಾಲೀಕರಿಗೆ ಠಾಣೆ ವತಿಯಿಂದ ನೋಟಿಸ್ ಕೊಡುವ ವ್ಯವಸ್ಥೆ ಮಾಡಿ, ಜನ ಸಂದನಿ ಇರುವಂತಹ ಅಂಗಡಿಗಳಲ್ಲಿ ಸಿಸಿ ಕ್ಯಾಮರ ಆಳವಡಿಸಲು ಸೂಚಿಸಲಾಗುವುದು
ಪಟ್ಟಣದಲ್ಲಿ ದಿನೇ ದಿನೇ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಟ್ರಾಪಿಕ್ ಸಿಗ್ನಲ್ನ್ನು ಅತಿ ಶೀಘ್ರವಾಗಿ ಆಳವಡಿಸುವಾದಾಗಿ ಭರವಸೆ ನೀಡಿದರು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಗಳನ್ನು ಆಳವಡಿಸಲು ಮುಂದಾಗುತ್ತೇವೆ. ಮಾವಿನ ಮಾರುಕಟ್ಟೆ ಸಮಯದಲ್ಲಿ ಪಟ್ಟಣದಲ್ಲಿ ವಾಹನಗಳ ಸಂಚಾರ ಹೆಚ್ಚಾಗಲಿದ್ದು ಆ ಸಮಯದಲ್ಲಿ ಇಲಾಖೆ ವತಿಯಿಂದ ವಾಹನ ಸಂಚಾರದ ದಟ್ಟಣೆ ಸರಿದೂಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು ಹಾಗು ಪುರಸಭೆ ವ್ಯಾಪಾರ ವಾಣಿಜ್ಯ ಮಳಿಗೆಗೆಯಲ್ಲಿ ಸಿಸಿ ಕ್ಯಾಮರಗಳು ಕೆಟ್ಟುಹೋಗಿದ್ದು, ಪುರಸಭೆಗೆ ಜಿಲ್ಲಾಧಿಕಾರಿಗಳಿಂದ ಸರಿಪಡಿಸಲು ಆದೇಶ ಪುರಸಭೆ ಅಧಿಕಾರಿಗಳಿಗೆ ಸೂಚನೆ ಕೊಡಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಎಸ್ಸಿ , ಎಸ್ಟಿ ಸಮುದಾಯದ ಕುಂದುಕೊರತೆ ಸಭೆಯನ್ನು ಆಯೋಜಿಸಿ ಆ ಸಭೆಗೆ ಕುದ್ದಾಗಿ ನಾನೇ ಬಂದು ಸಭೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದು ಅದಕ್ಕೆ ಇಲಾಖೆಯಿಂದ ಸೂಚನೆ ಹಾಗು ಸಲಹೆಗಳನ್ನ ನೀಡಲಾಗುವುದು.
ಈ ಸಮಯದಲ್ಲಿ ಪೊಲೀಸ್ ನಿರೀಕ್ಷ ಎಂ.ಬಿ.ಗೊರವನಕೊಳ್ಳ ಹಾಗು ಸಿಬ್ಬಂದಿ ಇದ್ದರು.