

ಶ್ರೀನಿವಾಸಪುರ : ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಸಂಜೆ ಸಿಐಎಸ್ಎಫ್ ಎಎಸ್ಐ ಪಿ.ಸಿ.ಬರ್ಮನ್ ನೇತೃತ್ವದಲ್ಲಿ ಸಿಐಎಸ್ಎಫ್ ನಂಬರ್ 931 ರ 40 ಸೈನ್ಯಕರಿಂದ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಎಂಜಿ ರಸ್ತೆ, ಚಿಂತಾಮಣಿ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದ ಸಿಐಎಸ್ಎಫ್ ತುಕಡಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.
ಅಲ್ಪ ಸಂಖ್ಯಾತ ಯುವ ಕಲ್ಯಾಣ ತಾಲೂಕು ಅಧ್ಯಕ್ಷ ಸಾದಿಕ್ಅಹಮ್ಮದ್, ಮುಖಂಡ ಅಬ್ದುಲ್ಲಾ ರವರು ಸೈನ್ಯಕರಿಗೆ ತಂಪು ಪಾನೀಯವನ್ನು ನೀಡಿ ಸ್ವಾಗತಿಸಿದರು.
ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ರವಿಶಂಕರ್, ಡಿವೈಎಸ್ಪಿ ನಂದಕುಮಾರ್ , ತಹಶೀಲ್ದಾರ್ ಜಿ.ಎನ್..ಸುದೀಂದ್ರ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಇದ್ದರು.

