ಶ್ರೀನಿವಾಸಪುರ:ದಳಸನೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾಸಹಕಾರ ಸಂಘಕ್ಕೆ 12 ಮಂದಿ ನೂತನ ನಿರ್ದೆಶಕರು ಆಯ್ಕೆ

ಶ್ರೀನಿವಾಸಪುರ: ದಳಸನೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾಸಹಕಾರ ಸಂಘಕ್ಕೆ 12 ಮಂದಿ ನೂತನ ನಿರ್ದೆಶಕರು ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ದಳಸನೂರು ರೇಷ್ಮೆ ಬೆಳೆಗಾರರ ಸಹಕಾರರ ಸಂಘ ನಿ. ಆಡಳಿತ ಮಂಡಳಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡಂತೆ ನಿರ್ದೆಶಕರು ಆಯ್ಕೆಯಾಗಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ದಳಸನೂರು ನಾಗಭೂಷಣ್ ರೆಡ್ಡಿ, ಒಳಗೇರನಹಳ್ಳಿ ಮುರಳಿ, ಚಿರುವನಹಳ್ಳಿ ರಾಮಕೃಷ್ಣಾರೆಡ್ಡಿ ಸಿ, ಗಾಂಡ್ಲಹಳ್ಳಿ ಬಿ.ಎಸ್ ಶಶಿಕುಮಾರ್, ಒಳಗೇರನಹಳ್ಳಿ ಶಿವಾರೆಡ್ಡಿ ಎಸ್, ಸಾಲಗಾರರ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಕೋನೇಟಿ ತಿಮ್ಮನಹಳ್ಳಿ ವೀರಪ್ಪ ಎಂ, ಸಾಲಗಾರರ ಹಿಂದುಳಿದ ಪ್ರ.ವರ್ಗ,ಎ ಮೀಸಲು ಕ್ಷೇತ್ರದಿಂದ ನೂಲುಪುರ ನಿಸಾರ್ ಅಹಮದ್, ಸಾಲಗಾರರ ಪ್ರ.ವರ್ಗ ಬಿ ಮೀಸಲು ಕ್ಷೇತ್ರದಿಂದ ದಳಸನೂರು ಎಸ್.ಜಿ ವೀರಬದ್ರ ಸ್ವಾಮಿ, ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಕಾಡುದೇವಂಡಹಳ್ಳಿ ಮಂಜುಳಮ್ಮ, ಪಾಳ್ಯ ಗ್ರಾಮದ ಶ್ಯಾಮಲ, ಸಾಲಗಾರರಲ್ಲದ ಕ್ಷೇತ್ರದಿಂದ ಬಿಸನಹಳ್ಳಿ ಅಶ್ವಥ್ ನಾರಾಯಣಗೌಡ, ಹಾಗು ಪರಿಶಿಷ್ಠ ಪಂಗಡ ಕ್ಷೇತ್ರಕ್ಕೆ ಗುಮ್ಮರೆಡ್ಡಿ ಪುರ ಶ್ರೀರಾಮಪ್ಪ ನವರು ಒಂದೇ ನಾಮಪತ್ರ ಸಲ್ಲಿಸಿದ್ದು ಇವರು ಅವಿರೋದವಾಗಿ ಆಯ್ಕೆಯಾಗಿರುತ್ತಾರೆ ಇದರಲ್ಲಿ ಕಾಂಗ್ರೇಸ್ ಬೆಂಬಲಿತ ನಿರ್ದೆಶಕರಾಗಿ 11 ಮಂದಿ, ಜೆಡಿಎಸ್ ಬೆಂಬಲಿತ 1 ಸ್ಥಾನಗಳು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೂತನ ನಿರ್ದೆಶಕರನ್ನು ಅಭಿನಂದಿಸಿ ಮಾತನಾಡಿದ ಮಾವು ಮಂಡಳಿ ಅಭಿವೃದ್ದಿ ಮಾಜಿ ಅದ್ಯಕ್ಷ ದಳಸನೂರು ಗೋಪಾಲಕೃಷ್ಣ ಮಾತನಾಡಿ ಈ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಿದ್ದು ಇದರಲ್ಲಿ 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ ಸಾಮಾಜಿಕವಾಗಿ ಕಾಂಗ್ರೇಸ್ ಪಕ್ಷದ ವತಿಯಿಂದ ಎಲ್ಲಾ ಮುಖಂಡರ ತೀರ್ಮಾನದಿಂದ ಒಂದು ಸ್ಥಾನ ಜೆಡಿಎಸ್ ಪಕ್ಷದ ಸದಸ್ಯ ಶಿವಾರೆಡ್ಡಿ ಯವರಿಗೆ ಒಂದು ಸ್ಥಾನ ಬಿಟ್ಟುಕೊಟ್ಟು ಉಳಿದ 10 ಸ್ಥಾನಗಳನ್ನು ನಮ್ಮ ತಕ್ಕೆಗೆ ಪಡೆದಿದ್ದೇವೆ, ಅವಿರೋದವಾಗಿ ಆಯ್ಕೆಯಾದ ಶ್ರೀರಾಮಪ್ಪನವರು ಸೇರಿ ಒಟ್ಟು ಕಾಂಗ್ರೇಸ್ ಪಕ್ಷಕ್ಕೆ 11 ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದೇವೆ, ರೈತರ ಹಿತಕ್ಕಾಗಿ ಸ್ಥಾಪನೆಯಾಗಿರುವ ಸಂಘದ ಶ್ರೇಯೋಭಿವೃದ್ದಿಗೆ ಎಲ್ಲಾ ನಿರ್ದೆಶಕರು ಜೊತೆಗೂಡಿ ಕೆಲಸ ಮಾಡಬೇಕು, ಈ ಚುನಾವಣೆಗೆ ಎಲ್ಲಾ ಸದಸ್ಯರು ಸಹಕಾರ ನೀಡಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಹಕರಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಎಲ್ಲಾ ಮುಖಂಡರಿಗೂ ಕೃತಜ್ನತೆಗಳನ್ನು ತಿಳಿಸಿದರು.
ಈ ಚುನಾವಣೆಯನ್ನು ರಿಟರ್ನಿಂಗ್ ಅಧಿಕಾರಿ ಬಿ.ಆರ್ ಶಿವಶಂಕರ್, ಕಾರ್ಯನಿರ್ವಾಹಣಾಧಿಕಾರಿ ಶ್ರೀನಾಥ್, ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಬೀಮಗುಂಟಪಲ್ಲಿ ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ವಿ ಶ್ರೀನಿವಾಸ್, ಪಾಳ್ಯ ಗೋಪಾಲರೆಡ್ಡಿ, ಮಾಸ್ತೇನಹಳ್ಳಿ ಗ್ರಾ.ಪಂ ಅದ್ಯಕ್ಷ ರವಿಕುಮಾರ್, ಕಂಬಾಲಪಲ್ಲಿ ಶ್ರೀನಿವಾಸ್, ಗೊಲ್ಲಪಲ್ಲಿ ಪ್ರಸನ್ನ, ಆನಂದ್ ರೆಡ್ಡಿ, ರೇಲಿಂಗಿ ಶ್ರೀನಿವಾಸ್, ಅಂಬೇಡ್ಕರ್ ಪಾಳ್ಯ ರವಿ, ಜಗದೀಶ್, ಮೊಗಿಲಹಳ್ಳಿ ಮಣಿ, ಮುಂತಾದ ಮುಖಂಡರು ಹಾಜರಿದ್ದರು.