

ಶ್ರೀನಿವಾಸಪುರ : ದಾಖಲೆ ಇಲ್ಲದ 1.50 ಲಕ್ಷ ರೂಗಳನ್ನು ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ರಾತ್ರಿ ಚೆಕ್ಪೋಸ್ಟ್ನಲ್ಲಿ ಶಿಡ್ಲಘಟ್ಟ ತಾಲೂಕಿನ ಬುಡುಗವಾರಿಪಲ್ಲಿ ಗ್ರಾಮದ ಗೋಪಾಲ. ಎಸ್ (23 ವರ್ಷ) ಎಂಬುವವರು ನೆರೆಯ ಆಂದ್ರದಿಂದ ಸ್ವಂತ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹಿಂತುರುಗುತ್ತಿದ್ದ ವೇಳೆ ಹಕ್ಕಿ ಪಿಕ್ಕಿ ಕಾಲೋನಿ ಚೆಕ್ ಪೋಸ್ಟ್ನಲ್ಲಿ ದ್ವಿಚಕ್ರ ವಾಹನವನ್ನು ಪರಿಶೀಲಿಸುತ್ತಿದ್ದ ವೇಳೆ 1.50 ಲಕ್ಷ ಹಣವು ಸಿಕ್ಕಿದ್ದು , ಹಣಕ್ಕೆ ಯಾವುದೇ ದಾಖಲೆಗಳು ಇಲ್ಲದೆ ಇದುದ್ದರಿಂದ ಹಣವನ್ನು ಹಾಗು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡ ರಾಯಲ್ಪಾಡು ಪೊಲೀಸರು ದೂರ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಎಸ್ಎಸ್ಟಿ ತಪಾಸಣಾಧಿಕಾರಿ ನವೀನ್ ಹಾಗೂ ಸಿಪಿಐ ಜಯನಾಂದ್ ಮಾರ್ಗದರ್ಶನದಲ್ಲಿ ಪಿಎಸ್ಐ ಯೋಗೀಶ್ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಸಿದ್ದೇಶ್, ಭರತ್ರಾಜ್, ಸುದರ್ಶನ್, ಕ್ಯಾಮರ ಮ್ಯಾನ್ ಮಧುರಾಜ್ ವಶಪಡಿಸಿಕೊಂಡಿದ್ದಾರೆ.
